ಮತ್ತೊಮ್ಮೆ ಆರಂಭದಲ್ಲೇ ಸೋತ ಸೈನಾ, ಸಮೀರ್ಗೆ ಜಯ
ಡೆನ್ಮಾರ್ಕ್ ಓಪನ್
ಹೈದರಾಬಾದ್, ಅ.16: ಸಮೀರ್ ವರ್ಮಾ ಹಾಗೂ ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ, ಮಾಜಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಜಪಾನ್ನ ಸಯಾಕಾ ಟಕಹಶಿ ವಿರುದ್ಧ 15-21,21-23 ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸಮೀರ್ ವರ್ಮಾ ಜಪಾನ್ನ ಕಾಂಟಾ ಸುನೆಯಮಾ ಅವರನ್ನು 21-11, 21-11 ನೇರ ಗೇಮ್ಗಳ ಅಂತರದಿಂದ ಮಣಿಸಿ ಸುಲಭ ಜಯ ದಾಖಲಿಸಿದರು. ಸಮೀರ್ ಮುಂದಿನ ಸುತ್ತಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್ರನ್ನು ಎದುರಿಸಲಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಪ್ರಣವ್ ಹಾಗೂ ಸಿಕ್ಕಿ ಜರ್ಮನಿಯ ಮರ್ವಿನ್ ಸೀಡೆಲ್ ಹಾಗೂ ಲಿಂಡಾ ಫ್ಲೆಯರ್ರನ್ನು 21-16, 21-11 ಗೇಮ್ಗಳಿಂದ ಸೋಲಿಸಿದರು. ಭಾರತದ ಇನ್ನೊಂದು ಜೋಡಿ ಸಾತ್ವಿಕ್ಸಾಯಿರಾಜ್ ರಾನಿಕ್ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಕೊನೆಯ ನಿಮಿಷದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಿತು.