‘ ಅ.19ರಂದು ಹಜ್ ಆಯೋಜಕರ ಸಮಾವೇಶ’
ಬೆಂಗಳೂರು, ಅ.17: ರಾಜ್ಯ ಹಜ್ ಆಯೋಜಕರ ಸಂಘದ ಸಮಾವೇಶವನ್ನು ಅ.19ರಂದು ಬೆಳಗ್ಗೆ 10 ಗಂಟೆಗೆ ನಗರದ ಬಾಗಲೂರು ರಸ್ತೆಯಲ್ಲಿರುವ ಸಿದ್ದೀಖಿ ಫಾರ್ಮ್ಸ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಇಕ್ಬಾಲ್ ಎ.ಸಿದ್ದೀಖಿ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಗೌರವ ಅತಿಥಿಗಳಾಗಿ ರಾಜ್ಯ ಹಜ್ ಸಮಿತಿಯ ಸಿಇಓ ಸರ್ಫರಾಝ್ ಖಾನ್, ಇರಾಕ್ ಹಾಗೂ ಜೋರ್ಡನ್ ಮಾಜಿ ರಾಯಭಾರಿ ಆರ್.ದಯಾಕರ ಪಾಲ್ಗೊಳ್ಳಲಿದ್ದಾರೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story