ಕ್ಯಾನ್ಸರ್ ಜಾಗತಿಗಾಗಿ ವಾಕಥಾನ್
ಬೆಂಗಳೂರು, ಅ.17: ಸಖಿ ಫೌಂಡೇಷನ್ ವತಿಯಿಂದ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಅ.20ರಂದು ಬೆಳಗ್ಗೆ 6.30ಕ್ಕೆ ಕಬ್ಬನ್ ಪಾರ್ಕ್‌ನಲ್ಲಿ ವಾಕಥಾನ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಲಕ್ಷ್ಮೀ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ವಿವಿಧ ತಜ್ಞರು ವಿಚಾರ ಮಂಡನೆ ಮಾಡಲಿದ್ದಾರೆ. ಜೊತೆಗೆ ಕಿಮೋಥೆರಪಿಯಿಂದ ಕೇಶ ಕಳೆದುಕೊಂಡ ರೋಗಿಗಳಿಗೆ ಕೇಶ ದಾನ ವಾಡಲಾಗುವುದು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಸಾಂಪ್ರದಾಯಿಕ ಉಡುಗೆಯಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
Next Story