Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅಸ್ತಮಾದಿಂದ ಮಲಬದ್ಧತೆವರೆಗೆ…: ಜೀರಿಗೆಯ...

ಅಸ್ತಮಾದಿಂದ ಮಲಬದ್ಧತೆವರೆಗೆ…: ಜೀರಿಗೆಯ ಅದ್ಭುತ ಆರೋಗ್ಯ ಲಾಭಗಳು ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ19 Oct 2019 8:23 PM IST
share
ಅಸ್ತಮಾದಿಂದ ಮಲಬದ್ಧತೆವರೆಗೆ…: ಜೀರಿಗೆಯ ಅದ್ಭುತ ಆರೋಗ್ಯ ಲಾಭಗಳು ನಿಮಗೆ ಗೊತ್ತೇ?

ಜೀರಿಗೆ ಹಾಕದೆ ಯಾವುದೇ ಭಾರತೀಯ ಆಹಾರ ಪೂರ್ಣವಾಗುವುದಿಲ್ಲ. ಅದು ಆಹಾರದ ರುಚಿಯನ್ನು ಇನ್ನೊಂದು ಮಟ್ಟಕ್ಕೊಯ್ಯುತ್ತದೆ. ಆದರೆ ಜೀರಿಗೆಯ ಉಪಯೋಗ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಇತರ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಂತಿಲ್ಲ. ಇಲ್ಲಿದೆ ಜೀರಿಗೆಯ ಆರೋಗ್ಯಲಾಭಗಳ ಕುರಿತು ಮಾಹಿತಿ......

► ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರಿಗೆಯಲ್ಲಿ ಥೈಮಾಲ್‌ನೊಂದಿಗೆ ಇತರ ಸಾರಭೂತ ತೈಲಗಳಿರುವುದರಿಂದ ಅದು ಜೀರ್ಣಾಂಗವನ್ನು ಉತ್ತೇಜಿಸುತ್ತದೆ. ಇವು ಜೊಲ್ಲು ಅಥವಾ ಲಾಲಾರಸ ಗ್ರಂಥಿಗಳನ್ನು ಪ್ರಚೋದಿಸುವ ಮೂಲಕ ಜೀರ್ಣಕ್ರಿಯೆಗೆ ಇನ್ನಷ್ಟು ನೆರವಾಗುತ್ತವೆ. ಒಂದು ಕಪ್ ನೀರಿನಲ್ಲಿ ಒಂದು ಟೀ ಸ್ಪೂನ್ ಜೀರಿಗೆಯನ್ನು ಹಾಕಿ ಕುದಿಸಿದರೆ ಜೀರಾ ನೀರು ಸಿದ್ಧ. ಇದನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಜೀರ್ಣಾಂಗದ ಆರೋಗ್ಯ ಹೆಚ್ಚುತ್ತದೆ.

► ಮಲಬದ್ಧತೆಯನ್ನು ನಿವಾರಿಸುತ್ತದೆ

ಜೀರಿಗೆಯಲ್ಲಿ ಸಮೃದ್ಧವಾಗಿರುವ ನಾರು ಜಠರಗರುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ಕಿಣ್ವಗಳ ಸ್ರವಿಸುವಿಕೆಯನ್ನು ಪ್ರಚೋದಿಸುತ್ತದೆ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಶಮನಗೊಳಿಸಿ ಮಲಬದ್ಧತೆಯಿಂದ ವಿಮೋಚನೆ ನೀಡುತ್ತದೆ. ಇದಿಷ್ಟೇ ಅಲ್ಲ,ಮೂಲವ್ಯಾಧಿಯಂತಹ ಜೀರ್ಣಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಟಕ್ಕೂ ನೆರವಾಗುವ ಜೀರಿಗೆ ನೈಸರ್ಗಿಕ ವಿರೇಚಕವಾಗಿದೆ.

ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಖಾಲಿಹೊಟ್ಟೆಯಲ್ಲಿ ಜೇನು ಮತ್ತು ನೀರಿನೊಂದಿಗೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

► ಶೀತ ಮತ್ತು ಅಸ್ತಮಾದ ವಿರುದ್ಧ ಹೋರಾಡುತ್ತದೆ

ಜೀರಿಗೆ ಮತ್ತು ಶುಂಠಿ ಹೆಚ್ಚಿನ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ ಮತ್ತು ಇವುಗಳ ಸಂಯೋಜನೆಯು ಕೆಮ್ಮು ಮತ್ತು ಶೀತಕ್ಕೆ ರಾಮಬಾಣವಾಗಿದೆ. ಜೀರಿಗೆಯು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಶಮನಗೊಳಿಸುತ್ತದೆ. ತನ್ಮೂಲಕ ಸೋಂಕುಗಳು ಮತ್ತು ಅಲರ್ಜಿಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಒಂದು ಕಪ್ ನೀರಿಗೆ ಒಂದು ಚಮಚ ಜೀರಿಗೆ ಮತ್ತು ಶುಂಠಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ,ಬಳಿಕ ಅದನ್ನು ಸೋಸಿ. ಈ ನೀರನ್ನು ಪ್ರತಿದಿನ ಕುಡಿದು ನೋಡಿ.

► ಗರ್ಭಿಣಿಯರಿಗೆ ಒಳ್ಳೆಯದು

ಹೆಚ್ಚಿನ ಮಹಿಳೆಯರು ಗರ್ಭ ಧರಿಸಿದ್ದಾಗ ವಾಕರಿಕೆ, ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಲು ಜೀರಾ ನೀರು ನೆರವಾಗುತ್ತದೆ. ಅಲ್ಲದೆ ಇದು ಎದೆಹಾಲನ್ನೂ ಹೆಚ್ಚಿಸುತ್ತದೆ. ಇದಕ್ಕಾಗಿ ಗರ್ಭಿಣಿಯರು ಪ್ರತಿದಿನ ಒಂದು ಗ್ಲಾಸ್ ಬಿಸಿನೀರಿಗೆ ಜೀರಿಗೆಯ ಹುಡಿಯನ್ನು ಸೇರಿಸಿ ಕುಡಿಯಬೇಕು.

► ನಿದ್ರಾಹೀನತೆಯ ವಿರುದ್ಧ ಹೋರಾಡುತ್ತದೆ

ಜೀರಿಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಇದರಲ್ಲಿರುವ ಮೆಲಾಟೊನಿನ್ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಬಾಳೆಹಣ್ಣು ಮತ್ತು ಜೀರಿಗೆಯ ಸೇವನೆಯು ಒಳ್ಳೆಯ ನಿದ್ರೆಯನ್ನು ನೀಡುತ್ತದೆ. ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ ಅರ್ಧ ಟೀ ಚಮಚ ಜೀರಿಗೆ ಹುಡಿಯನ್ನು ಸೇರಿಸಿ ಪೇಸ್ಟ್‌ನಂತೆ ಮಾಡಿ. ರಾತ್ರಿ ಹಾಸಿಗೆಗೆ ಬಿದ್ದುಕೊಳ್ಳುವ ಮುನ್ನ ಇದನ್ನು ತಿಂದರೆ ಸುಖನಿದ್ರೆ ಬರುತ್ತದೆ.

► ಚರ್ಮಕ್ಕೆ ಹೊಳಪು ನೀಡುತ್ತದೆ

ಜೀರಿಗೆ ಹುಡಿ, ಅರಿಷಿಣ ಹುಡಿ ಮತ್ತು ಜೇನು ಈ ಮೂರನ್ನೂ ಸೇರಿಸಿ ತಯಾರಿಸಿದ ಫೇಸ್ ಪ್ಯಾಕ್‌ನ್ನು ಬಳಸಿದರೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆರಡು ಬಾರಿ ಇದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಮುಖ ತೊಳೆದ ಬಳಿಕ ಮಾಯಿಶ್ಚರೈಸರ್ ಅಥವಾ ಜಜೋಬಾ ಎಣ್ಣೆಯನ್ನು ಹಚ್ಚಿಕೊಳ್ಳಲು ಮರೆಯಬೇಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X