Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಭಾರತದ ಬ್ಯಾಂಕುಗಳಿಗೆ ಘಸ್ನಿ ಮಹಮ್ಮದ್...

ಭಾರತದ ಬ್ಯಾಂಕುಗಳಿಗೆ ಘಸ್ನಿ ಮಹಮ್ಮದ್ ದಾಳಿ!

-ಚೇಳಯ್ಯ chelayya@gmail.com-ಚೇಳಯ್ಯ chelayya@gmail.com19 Oct 2019 11:56 PM IST
share
ಭಾರತದ ಬ್ಯಾಂಕುಗಳಿಗೆ ಘಸ್ನಿ ಮಹಮ್ಮದ್ ದಾಳಿ!

 ದೇಶದ ಬ್ಯಾಂಕುಗಳು ಮುಳುಗುವುದಕ್ಕೆ ಕಾರಣವೇನು? ಆರ್ಥಿಕ ಹಿಂಜರಿತದ ಹಿಂದೆ ಯಾರಿದ್ದಾರೆ? ಕೇಂದ್ರ ಸಚಿವರಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಬಳಿ ತಕ್ಷಣವೇ ಒಂದು ವರದಿಯನ್ನು ಸಿದ್ಧಪಡಿಸಲು ಹೇಳಲಾಯಿತು. ನಿಜಕ್ಕೂ ಬ್ಯಾಂಕ್‌ಗಳಲ್ಲಿದ್ದ ಹಣವನ್ನು ದೋಚಿದವರು ಯಾರು? ಯಾರ್ಯಾರ ಸಾಲಗಳೆಲ್ಲ ಬಾಕಿಯಿದೆ ಎನ್ನುವುದರ ಕುರಿತಂತೆ ವಿವರಗಳನ್ನು ನೀಡಲು ಹೇಳಲಾಯಿತು. ತಕ್ಷಣವೇ ಆರ್‌ಬಿಐ ಗವರ್ನರ್ ಗೂಗಲ್‌ಗೆ ಹೋಗಿ ಮಾಹಿತಿಗಳನ್ನು ಸಂಗ್ರಹಿಸತೊಡಗಿದರು. ವಿವಿಧ ಆರೆಸ್ಸೆಸ್ ಸೈಟ್‌ಗಳು ಒದಗಿಸಿದ ಅತ್ಯಮೂಲ್ಯ ಅಂಕಿಸಂಕಿಗಳ ಆಧಾರದಲ್ಲಿ ವರದಿಯನ್ನು ತಕ್ಷಣವೇ ಸಿದ್ಧಪಡಿಸಲಾಗಿ, ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು. ಯಾರ್ಯಾರು ಎಷ್ಟೆಷ್ಟು ಸಾಲಗಳನ್ನು ಪಡೆದಿದ್ದಾರೆ ಎನ್ನುವುದನ್ನು ಸ್ವತಃ ಗವರ್ನರ್ ಸಾಹೇಬರೇ ಸುದ್ದಿಗೋಷ್ಠಿಯ ಮೂಲಕ ಮಾಧ್ಯಮಗಳಿಗೆ ವಿವರಿಸಿದರು. ಅದರ ವಿವರಗಳು ಇಲ್ಲಿವೆ.

***

ಪ್ರಾಚ್ಯ ಇಲಾಖೆ ಮತ್ತು ಆರ್‌ಬಿಐ ಜೊತೆ ಸೇರಿ ನಡೆಸಿದ ತನಿಖೆಯ ಬಳಿಕ ಹಲವು ಮಹತ್ವ ಸಾಲಗಳು ಬೆಳಕಿಗೆ ಬಂದಿವೆ. ಭಾರತದ ಬ್ಯಾಂಕ್‌ಗಳ ಕುಸಿತಕ್ಕೆ ಈ ಬಾಕಿಯಿರುವ ಸಾಲಗಳೇ ಮುಖ್ಯ ಕಾರಣ.

ತಾಜ್‌ಮಹಲ್ ಕಟ್ಟಲು ಸಾಲ:

  ತನಿಖೆಯ ವೇಳೆ ಮೊಗಲ್ ಅರಸ ಶಹಜಹಾನ್ ತಾಜ್‌ಮಹಲ್ ಕಟ್ಟಲು ವಿವಿಧ ಬ್ಯಾಂಕ್‌ಗಳಿಂದ ಸುಮಾರು 10 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ವಿವಿಧ ಬ್ಯಾಂಕ್‌ಗಳು ಶಹಜಹಾನ್‌ಗೆ ಹಲವು ನೋಟಿಸುಗಳನ್ನು ನೀಡಿದ್ದರೂ ಸ್ಪಂದಿಸಿರಲಿಲ್ಲ. ಅದು ಬಡ್ಡಿ ಸೇರಿ ವಿಪರೀತವಾಗಿದ್ದು ವಿವಿಧ ಬ್ಯಾಂಕ್‌ಗಳು ನಷ್ಟ ಅನುಭವಿಸಲು ಕಾರಣವಾಗಿದೆ. ಆದುದರಿಂದ ತಾಜ್‌ಮಹಲ್‌ನ್ನು ಅಂಬಾನಿ ಅಥವಾ ಅಧಾನಿಯವರಿಗೆ ಮಾರಿ, ನಷ್ಟವನ್ನು ತುಂಬಿಸುವಂತೆ ಸರಕಾರವನ್ನು ಮನವಿ ಮಾಡಲಾಗಿದೆ. ಇಲ್ಲವಾದರೆ, ತಾಜ್‌ಮಹಲ್ ಸಾಲಕ್ಕೆ ಸಂಬಂಧಿಸಿ ಆಗ್ರಾದಲ್ಲಿರುವ ಎಲ್ಲ ಮುಸ್ಲಿಮರಿಗೂ ನೋಟಿಸ್ ಕಳುಹಿಸಲಾಗುವುದು ಮತ್ತು ಅವರ ಜಮೀನು, ಸೊತ್ತುಗಳನ್ನು ವಶಪಡಿಸಿ ನಷ್ಟವನ್ನು ತುಂಬಿಸಲಾಗುವುದು.

ಅಕ್ಬರ್ ಮದುವೆಗೆ ಮಾಡಿದ ಸಾಲ:

ಅಕ್ಬರ್ ಅವರು ರಜಪೂತ ಕನ್ಯೆ ಜೋಧಾಳನ್ನು ಮದುವೆಯಾಗಲು ಅಪಾರ ಪ್ರಮಾಣದ ಉಡುಗೊರೆಗಳನ್ನು ನೀಡುವ ಅಗತ್ಯವಿತ್ತು. ಈ ಸಂದರ್ಭದಲ್ಲಿ ಪಾಣಿಪತ್ ಯುದ್ಧ ನಡೆದುದರಿಂದ ಖಜಾನೆ ಖಾಲಿಯಾಗಿತ್ತು. ತನ್ನ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಸ್ಟೇಟ್ ಬ್ಯಾಂಕ್ ಆಫ್ ಈಸ್ಟ್ ಇಂಡಿಯಾದಿಂದ ನೂರು ಲಕ್ಷ ರೂಪಾಯಿ ಸಾಲ ಪಡೆದಿದ್ದು, ಅದನ್ನು ಇನ್ನೂ ಕಟ್ಟಿಲ್ಲ ಎನ್ನುವ ಅಂಶವೂ ತನಿಖೆಯಿಂದ ಬಹಿರಂಗವಾಗಿದೆ. ಈ ಹಣವನ್ನು ಮೊಗಲರ ಕುಟುಂಬಸ್ಥರಿಂದ ವಸೂಲಿ ಮಾಡುವ ಕ್ರಮ ಜಾರಿಯಲ್ಲಿರುವಾಗಲೇ ಕಾಂಗ್ರೆಸ್ ಸರಕಾರ ‘ಶಾದಿ ಭಾಗ್ಯ’ ಯೋಜನೆಯಡಿಯಲ್ಲಿ ಸಾಲವನ್ನು ಮನ್ನಾ ಮಾಡಿದ್ದು ಆರ್‌ಬಿಐ ಮೇಲೆ ಭಾರೀ ಒತ್ತಡವನ್ನು ಹೇರಿತು. ಇದು ದೇಶದ ಅರ್ಥವ್ಯವಸ್ಥೆಯ ಹಿಂಜರಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಕಾರಣಕ್ಕಾಗಿ ಮೊಗಲರು ಕಟ್ಟಿರುವ ಕೆಂಪುಕೋಟೆಯನ್ನು ಮಾರಿ, ಆ ಹಣವನ್ನು ಬ್ಯಾಂಕುಗಳಿಗೆ ತುಂಬಿಸಲು ಸರಕಾರದ ಮೇಲೆ ಒತ್ತಡ ಹೇರಲಾಗಿದೆ.

ಬ್ಯಾಂಕುಗಳಿಗೆ ಘಸ್ನಿ ಮುಹಮ್ಮದ್ ದಾಳಿ:

ಅತ್ಯಂತ ಮಹತ್ವದ ಅಂಶವೆಂದರೆ, ಘಸ್ನಿ ಈ ದೇಶಕ್ಕೆ ಹಲವು ಬಾರಿ ದಾಳಿ ನಡೆಸಿರುವುದು ದೇವಸ್ಥಾನಗಳಿಗೆ ಮಾತ್ರವಲ್ಲ. ತನ್ನ ಈ ದಾಳಿಯನ್ನು ಸಂಘಟಿಸಲು ಭಾರತದ ವಿವಿಧ ಬ್ಯಾಂಕ್‌ಗಳಿಗೆ ಆತ ಅರ್ಜಿ ಗುಜರಾಯಿಸಿದ್ದ. ಆದರೆ ಆತ ವಿದೇಶಿಯನಾಗಿರುವುದರಿಂದ ಬ್ಯಾಂಕುಗಳು ಹಣವನ್ನು ನಿರಾಕರಿಸಿದ್ದವು. ಆದುದರಿಂದ ಸಿಟ್ಟಾದ ಆತ ಅಫ್ಘಾನಿಸ್ತಾನದಿಂದ ಬಂದು ವಿವಿಧ ಬ್ಯಾಂಕುಗಳಿಗೂ ದಾಳಿಯನ್ನು ನಡೆಸಿ ಅಲ್ಲಿ ಇಟ್ಟಿರುವ ಚಿನ್ನಾಭರಣ, ಹಣಗಳನ್ನು ದೋಚಿ ಅಫ್ಘಾನಿಸ್ತಾನಕ್ಕೆ ಒಯ್ದಿದ್ದ. ಆ ಹಣ ಮತ್ತು ಚಿನ್ನಗಳನ್ನು ಮರಳಿಸಬೇಕು ಎಂದು ಅಫ್ಘಾನಿಸ್ತಾನಕ್ಕೆ ಒತ್ತಡ ಹೇರಲು ಪ್ರಧಾನಿಯವರಿಗೆ ಮನವಿ ಮಾಡಲಾಗಿದೆ. ಪ್ರಧಾನಿಯವರು ಶೀಘ್ರದಲ್ಲೇ ಅಫ್ಘಾನಿಸ್ತಾನಕ್ಕೆ ತೆರಳಿ ಭಾರತದ ಬ್ಯಾಂಕ್‌ಗಳಿಂದ ದೋಚಿದ ಹಣ ಮತ್ತು ಚಿನ್ನಗಳನ್ನು ವಾಪಸ್ ತರಲಿದ್ದಾರೆ.

ತಾಮ್ರದ ನಾಣ್ಯ ನಿಷೇಧ ಮಾಡಿರುವುದು:

 ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಮುಹಮ್ಮದ್ ಬಿನ್ ತುಘಲಕ್ ತಾಮ್ರದ ನಾಣ್ಯವನ್ನು ನಿಷೇಧಿಸಿ ಚರ್ಮದ ನಾಣ್ಯಗಳನ್ನು ಜಾರಿಗೆ ತಂದುದು ತೀವ್ರ ಪರಿಣಾಮ ಬೀರಿತು. ತಾಮ್ರದ ನಾಣ್ಯವನ್ನು ಏಕಾಏಕಿ ಹಿಂದೆಗೆದುಕೊಂಡುದುದರಿಂದ ಜನರು ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲಬೇಕಾಯಿತು. ನೂರಾರು ಮಂದಿ ಆತ್ಮಹತ್ಯೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ದಿಲ್ಲಿಯಿಂದ ದೌಲತಾಬಾದ್‌ಗೆ ರಾಜಧಾನಿಯನ್ನು ವರ್ಗಾಯಿಸಿದ್ದು ಕೂಡ ಅರ್ಥವ್ಯವಸ್ಥೆಯ ಮೇಲೆ ಹೊಡೆತ ಬಿತ್ತು. ದೌಲತಾಬಾದ್‌ನ್ನು ಹೊಸ ರಾಜಧಾನಿಯನ್ನಾಗಿ, ಅದನ್ನು ಸ್ಮಾರ್ಟ್ ಸಿಟಿ ಮಾಡಲು ಆರ್‌ಬಿಐನಿಂದ ತುಘಲಕ್ ನೇರವಾಗಿ ಹಣವನ್ನು ಪಡೆದಿದ್ದ. ಆದರೆ ಮತ್ತೆ ರಾಜಧಾನಿಯನ್ನು ದಿಲ್ಲಿಗೆ ವರ್ಗಾಯಿಸಿದ್ದರಿಂದ ಈ ಹಣವನ್ನು ಪಾವತಿಸುವುದಕ್ಕೆ ತುಘಲಕ್ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಬ್ಯಾಂಕ್‌ಗಳು ಇದರಿಂದ ದಿವಾಳಿಯಾದವು.

ಬ್ಯಾಂಕುಗಳಿಗೆ ಟಿಪ್ಪು ದಾಳಿ:

ಟಿಪ್ಪು ಸುಲ್ತಾನ್ ಮಂಗಳೂರು ಮತ್ತು ಕೊಡಗಿನಲ್ಲಿ ದಾಳಿ ನಡೆಸಿದಾಗ ಅಲ್ಲಿರುವ ವಿವಿಧ ಬ್ಯಾಂಕ್‌ಗಳ ಶಾಖೆಗಳಿಗೂ ಭಾರೀ ಹಾನಿಯಾಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಹಣವನ್ನೆಲ್ಲ ಆತ ದೋಚಿ, ಅದರಿಂದ ಭಾರೀ ಪ್ರಮಾಣದ ಫಿರಂಗಿಗಳನ್ನು ಫ್ರೆಂಚರಿಂದ ಕೊಂಡುಕೊಂಡ. ರಫೇಲ್ ಹಗರಣಕ್ಕಿಂತಲೂ ಭೀಕರ ಹಗರಣ ಇದಾಗಿರುವುದರಿಂದ, ಇದನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಆತ ರಾಕೆಟ್‌ಗಳ ನಿರ್ಮಾಣಕ್ಕೂ ಅಪಾರ ಪ್ರಮಾಣದಲ್ಲಿ ಬ್ಯಾಂಕ್ ಸಾಲವನ್ನು ಪಡೆದುಕೊಂಡ. ಆತ ಬ್ರಿಟಿಷರಿಗೆ ಮಕ್ಕಳನ್ನು ಒತ್ತೆಯಿಟ್ಟದ್ದು ತಾನು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಕಟ್ಟದೇ ಇರುವುದಕ್ಕಾಗಿ. ಟಿಪ್ಪು ಸುಲ್ತಾನನ ಎಲ್ಲ ಅರಮನೆಗಳನ್ನು ಸ್ವಾಧೀನ ಪಡೆದುಕೊಂಡು ಆತನ ಸಾಲಕ್ಕಾಗಿ ಮನ್ನಾ ಮಾಡಿಸುವ ಕೆಲಸ ನಡೆಯಬೇಕಾಗಿದೆ.

ಗಾಂಧೀಜಿಯಿಂದ ಸಾಲ:

ದೇಶಾದ್ಯಂತ ಸ್ವಾತಂತ್ರ ಹೋರಾಟವನ್ನು ಸಂಘಟಿಸಲು, ಕಾಂಗ್ರೆಸ್ ಸ್ಥಾಪನೆಗೆ ಬೇಕಾದ ಖರ್ಚು ವೆಚ್ಚ ಸರಿದೂಗಿಸಲು ಮಹಾತ್ಮಾಗಾಂಧೀಜಿಯವರು ನೆಹರೂ ಮೂಲಕ ಒಂದು ಸಾವಿರ ಕೋಟಿ ರೂಪಾಯಿಯನ್ನು ಬ್ಯಾಂಕ್‌ನಿಂದ ಸಾಲವಾಗಿ ಪಡೆದಿದ್ದರು. ಆದರೆ ಇದನ್ನು ಬ್ಯಾಂಕಿಗೆ ಮರುಪಾವತಿಸುವಲ್ಲಿ ಅವರು ಸಂಪೂರ್ಣ ವಿಫಲರಾದರು. ಈ ಸಾಲವನ್ನು ತೀರಿಸುವುದಕ್ಕಾಗಿ ಸಾವರ್ಕರ್ ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡಬೇಕಾಗಿ ಬಂತು. ಬ್ರಿಟಿಷರ ಸೇವೆ ಮಾಡಿ ಒಂದಿಷ್ಟು ಸಾಲವನ್ನು ತೀರಿಸಿದರಾದರೂ, ಉಳಿದ ಸಾಲಗಳು ಹಾಗೆಯೇ ಉಳಿಯಿತು. ‘ಸಾಲ ಮಾಡಿ ನಡೆಸುವ ಸ್ವಾತಂತ್ರ ಹೋರಾಟ ನಮಗೆ ಬೇಕಾಗಿಲ್ಲ’ ಎಂದು ಹಿಂದೂ ಮಹಾ ಸಭಾ ಹೋರಾಟದಿಂದ ದೂರ ಉಳಿಯಿತು. ದೇಶವನ್ನು ಸಾಲಗಾರ ಮಾಡಿದ್ದಕ್ಕಾಗಿ ಸಿಟ್ಟುಕೊಂಡ ಗೋಡ್ಸೆ ಸಾಲ ಪಾವತಿ ಮಾಡಲು ಅವರನ್ನು ಕೋರಿಕೊಂಡ. ಒಪ್ಪದೇ ಇದ್ದಾಗ ಅವರನ್ನು ಕೊಂದ. ಇದೀಗ ಈ ಹಣವನ್ನು ಕಾಂಗ್ರೆಸ್ ಪಕ್ಷ ಭರಿಸಬೇಕಾಗಿದೆ. ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿಯವರೇ ಸದ್ಯಕ್ಕೆ ಗಾಂಧಿಯ ವಾರಸುದಾರರಾಗಿರುವುದರಿಂದ ಅವರೇ ಈ ಹಣವನ್ನು ಕಟ್ಟಿ ದೇಶದ ಆರ್ಥಿಕತೆಯನ್ನು ಉಳಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕಿರುವ ಆಸ್ತಿ, ಸೊತ್ತುಗಳನ್ನು ಮುಟ್ಟುಗೋಲು ಹಾಕಬೇಕು.

share
-ಚೇಳಯ್ಯ chelayya@gmail.com
-ಚೇಳಯ್ಯ chelayya@gmail.com
Next Story
X