Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಚೌಕಟ್ಟಿನಾಚೆ ಒಂದು ತೌಲನಿಕ ಕೃತಿ

ಚೌಕಟ್ಟಿನಾಚೆ ಒಂದು ತೌಲನಿಕ ಕೃತಿ

ಕೆ.ಎಂ. ವಿಶ್ವನಾಥ ಮರತೂರಕೆ.ಎಂ. ವಿಶ್ವನಾಥ ಮರತೂರ20 Oct 2019 5:07 PM IST
share
ಚೌಕಟ್ಟಿನಾಚೆ ಒಂದು ತೌಲನಿಕ ಕೃತಿ

ಕೃತಿಯೊಳಗೆ ಬಳಸಲಾದ ಪ್ರಾದೇಶಿಕತೆ ಕೃತಿಯ ಜೀವಾಳವಾಗಿದೆ. ಅದ್ಯಾವುದೇ ಮುಲಾಜಿಗೆ ಒಳಗಾಗದೆ ಪದಬಳಕೆಯಲ್ಲಿ ಹಿಂಜರಿಯದೇ ಅತ್ಯಂತ ಗಟ್ಟಿ ವಿಚಾರಗಳನ್ನು ಎತ್ತಿಕೊಂಡು ಬರವಣಿಗೆಯ ರೂಪ ಕೊಡಲಾಗಿದೆ. ಮನಸ್ಸುಗಳನ್ನು ತಿಳಿಗೊಳಿಸುವ ಪ್ರಯತ್ನವನ್ನು ಲೇಖಕರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಚೌಕಟ್ಟಿನಾಚೆ ಕೃತಿಯು ಯುವ ತಲೆಮಾರಿನ ಓದುಗರ ಮನಗೆಲ್ಲಬಲ್ಲ ಶಕ್ತಿ ಹೊಂದಿದ್ದು, ಒಂದು ತೌಲನಿಕ ಕೃತಿಯಾಗಿದೆ.

ಅನುಭವಗಳಾದರೆ ಅಕ್ಷರಗಳ ಜೊತೆಗೆ ಆಟವಾಡಬಹುದು. ನಮ್ಮಳಗೆ ಕಾಡಿದ ಅದೆಷ್ಟೊ ವಿಷಯಗಳಿಗೆ ಧ್ವನಿಯಾಗಬಹುದು. ಇಂತಹದ್ದೆ ಪ್ರಯತ್ನ ‘ಚೌಕಟ್ಟಿನಾಚೆ’ ಕೃತಿ ಪ್ರಯತ್ನ ಮಾಡಿದೆ. ಸಮಾಜದಲ್ಲಿರುವ ಅನೇಕ ವಿಷಯಗಳು ಸಮಯ ಬಂದಂತೆ ನಮಗೆ ಕಾಡಲಾರಂಭಿಸುತ್ತವೆ. ಅವಶ್ಯಕ ಮತ್ತು ಅನವಶ್ಯಕ ಎನ್ನುವ ವಿಚಾರಗಳತ್ತ ತೊಳಲಾಡುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರದತ್ತ ಕೇಂದ್ರೀಕೃತವಾಗುತ್ತವೆ. ಇಂತಹ ವಿಚಾರಗಳತ್ತ ಹೊರಳುವುದೇ ಚೌಕಟ್ಟಿನಾಚೆ ಕೃತಿಯ ಮುಖ್ಯ ಉದ್ದೇಶವಾಗಿದೆ. ಲೇಖಕರು ತಮ್ಮ ಲೇಖನಗಳ ಮೂಲಕ ಬೀದರ್ ಜಿಲ್ಲೆಯ ಸಾಹಿತ್ಯದ ಕೊಡುಗೆ ಅದರ ಆಳ ಅಗಲ ತಿಳಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಬೀದರ್‌ನ ಸಾಂಸ್ಕೃತಿಕ ವೈಭವವನ್ನು ತೆರೆದಿಡುವ ಮೂಲಕ ತಾವು ಬೀದರ್‌ನ ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ನಾಡಸೇವೆಯಲ್ಲಿ ನೈಜತೆ ಮೆರೆಯಲು ಪ್ರಯತ್ನಿಸಿದ ಬಗೆಯೂ ಉಲ್ಲೇಖಿಸಿದ್ದಾರೆ.

ಬೀದರ್ ಜಿಲ್ಲೆಯ ವೈಶಿಷ್ಟತೆ, ವಚನ ಸಾಹಿತ್ಯದ ಪ್ರಭಾವ, ವಚನಕಾರರು ಈ ಜಗತ್ತಿಗೆ ನೀಡಿದ ಕೊಡುಗೆಯನ್ನು ಹಿಡಿದಿಡುವ ಪ್ರಯತ್ನ ಕೃತಿಯ ಲೇಖಕರು ಮಾಡಿದ್ದಾರೆ. ವಚನ ಮತ್ತು ಕಾಯಕ ಮಹತ್ವ ತಿಳಿಸುವ ಮೂಲಕ ಅನುಸರಣೆ ಎಷ್ಟು ಅವಶ್ಯಕವಾಗಿದೆ ಎಂಬುವುದನ್ನು ತೋರ್ಪಡಿಸುವ ಪ್ರಯತ್ನ ಮಾಡಲಾಗಿದೆ. ಜಾನಪದದ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗೆ ವಿಭಿನ್ನ ಹಾಗೂ ವೈಶಿಷ್ಟತೆ ಮೆರೆಯುತ್ತದೆ ಎನ್ನುವುದನ್ನು ಪ್ರಯತ್ನಿಸಿದ್ದಾರೆ. ಲೇಖಕರಾದ ಸಂಜೀವಕುಮಾರ ಅತಿವಾಳೆ ಮೂಲತಃ ಶಿಕ್ಷಕರಾಗಿದ್ದು ಶಿಕ್ಷಣ ವೃತ್ತಿಯ ಬಗೆಗೆ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ, ವಿದ್ಯಾರ್ಥಿಯ ಜೀವನದ ಬಗ್ಗೆ, ಬೆಳಕು ಚೆಲ್ಲುವ ವಿಚಾರ ಮಾಡಿದ್ದಾರೆ. ಯುವಜನರನ್ನು ಹುರಿದುಂಬಿಸುವ ಮಾತುಗಳನ್ನು ಅತ್ಯಂತ ನಮ್ರವಾಗಿ ಆಡಿದ್ದಾರೆ. ಈ ಕೃತಿಯು ಕೆಲವು ಸಾಹಿತಿಗಳ ನುಡಿಚಿತ್ರ ಹೊಂದಿದ್ದು, ಅವರ ಜೀವನ ಸಾಹಿತ್ಯ ಸಾಧನೆ ಒಳಗೊಂಡಿರುವುದು ವಿಶೇಷವಾಗಿದೆ.

ಸಂಜೀವಕುಮಾರ ಅತಿವಾಳೆ ಈಗಾಗಲೇ ಸಾಹಿತ್ಯ ಸಂಘಟಕ ಎನ್ನುವ ಬಿರುದಿನೊಂದಿಗೆ ಬೀದರ ಜಿಲ್ಲೆಯಾದ್ಯಂತ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಾಹಿತ್ಯ ಸೇವೆ ಮಾಡಿದ್ದಾರೆ. ಅದರ ಒಟ್ಟಾರೆ ಅನುಭವಗಳನ್ನು ತಮ್ಮ ಮೊದಲ ಕೃತಿಯಲ್ಲಿ ಸೂಕ್ಷ್ಮವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ನೋವುಗಳ ಜೊತೆಗೆ ನಲಿವಿನ ಸಂಬಂಧವನ್ನು ಪದಗಳಲ್ಲಿ ಹಿಡಿದಿಡುವಲ್ಲಿ ಕೃತಿ ಯಶಸ್ವಿಯಾಗಿದೆ. ಲೇಖಕರು ಇನ್ನಷ್ಟು ಹಿರಿಯರ ವೈಚಾರಿಕ ಲೇಖನಗಳು, ನುಡಿಚಿತ್ರಗಳು, ಪ್ರಬಂಧಗಳ ಅಧ್ಯಯನ ನಡೆಸಿದರೆ ಇನ್ನಷ್ಟು ವೌಲಿಕ ಕೃತಿಗಳು ಇವರ ಲೇಖನಿಯ ಮೂಲಕ ಹೊರಬರುವುದರಲ್ಲಿ ಯಾವ ಸಂದೇಹವು ಇಲ್ಲ. ಸಂಜೀವಕುಮಾರ ಅತಿವಾಳೆ ಬೀದರ ನಾಡಿನ ಚಿರಪರಿಚಿತ ಸಾಹಿತ್ಯ ಸಂಘಟಕ. ಇದೀಗ ವೈಚಾರಿಕ ಲೇಖನಗಳನ್ನು ಬರೆಯುವ ಮೂಲಕ ಬರಹಗಾರನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಕೃತಿಯಲ್ಲಿಯೇ ಪದಗಳ ಮೋಡಿ ಮಾಡಿದ್ದಾರೆ. ಇವರಿಂದ ಮುಂದಿನ ದಿನಗಳಲ್ಲಿ ಭರವಸೆಯ ಬರವಣಿಗೆ ನಿರೀಕ್ಷಿಸಬಹುದಾಗಿದೆ. ಈ ಕೃತಿಗೆ ಶಕ್ತಿ ತುಂಬಿದ್ದು ಇದಕ್ಕೆ ಮುನ್ನುಡಿ ಬರೆದ ನಾಡಿನ ಹೆಸರಾಂತ ಸಾಹಿತಿ ಕುಷ್ಟಗಿ ಸರ್. ಅವರು ಜಾಣತನದ ಮಾತಿನ ಮೂಲಕ ಕೃತಿಯ ಪರಿಚಯ ಮಾಡಿದ್ದಾರೆ.

ಕೃತಿಯು ಸಂಶೋಧನಾ ಹಾದಿಯಲ್ಲಿದ್ದು ಅದರ ಮುಂದಾಲೋಚನೆಯನ್ನು ಕೃತಿಕಾರ ಮಾಡಿದರೆ ಹೆಚ್ಚು ಬರೆಯಬಲ್ಲ ಶಕ್ತಿಯಿದೆ ಎಂದೆನಿಸುತ್ತದೆ. ಕೃತಿಯೊಳಗೆ ಬಳಸಲಾದ ಪ್ರಾದೇಶಿಕತೆ ಕೃತಿಯ ಜೀವಾಳವಾಗಿದೆ. ಅದ್ಯಾವುದೇ ಮುಲಾಜಿಗೆ ಒಳಗಾಗದೆ ಪದಬಳಕೆಯಲ್ಲಿ ಹಿಂಜರಿಯದೇ ಅತ್ಯಂತ ಗಟ್ಟಿ ವಿಚಾರಗಳನ್ನು ಎತ್ತಿಕೊಂಡು ಬರವಣಿಗೆಯ ರೂಪ ಕೊಡಲಾಗಿದೆ. ಮನಸ್ಸುಗಳನ್ನು ತಿಳಿಗೊಳಿಸುವ ಪ್ರಯತ್ನವನ್ನು ಲೇಖಕರು ಪ್ರಮಾಣಿಕವಾಗಿ ಮಾಡಿದ್ದಾರೆ. ಚೌಕಟ್ಟಿನಾಚೆ ಕೃತಿಯು ಯುವ ತಲೆಮಾರಿನ ಓದುಗರ ಮನಗೆಲ್ಲಬಲ್ಲ ಶಕ್ತಿ ಹೊಂದಿದ್ದು, ಒಂದು ತೌಲನಿಕ ಕೃತಿಯಾಗಿದೆ.

share
ಕೆ.ಎಂ. ವಿಶ್ವನಾಥ ಮರತೂರ
ಕೆ.ಎಂ. ವಿಶ್ವನಾಥ ಮರತೂರ
Next Story
X