ಲಂಡನ್: ಭಾರತ ವಿರೋಧಿ ರ್ಯಾಲಿಗೆ ಮೇಯರ್ ಸಾದಿಕ್ ಖಾನ್ ರಿಂದ ತೀವ್ರ ವಿರೋಧ
ರದ್ದುಗೊಳಿಸಲು ಆಯೋಜಕರಿಗೆ ಕರೆ
ಹೊಸದಿಲ್ಲಿ, ಅ.20: ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ಲಂಡನ್ ನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಭಾರತ ವಿರೋಧಿ ರ್ಯಾಲಿಗೆ ಲಂಡನ್ ಮೇಯರ್ ಸಾದಿಕ್ ಖಾನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೀಪಾವಳಿಯ ದಿನದಂದು ನಡೆಸಲುದ್ದೇಶಿಸಲಾಗಿರುವ ರ್ಯಾಲಿಯಲ್ಲಿ 5000ದಿಂದ 10,000 ಪ್ರತಿಭಟನಕಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಿಚ್ಮಂಡ್ ಟೆರೇಸ್ ನಿಂದ ರ್ಯಾಲಿ ಹೊರಟು ಭಾರತೀಯ ಹೈಕಮಿಷನ್ ಕಚೇರಿ ಮುಂದೆ ಪ್ರತಿಭಟನಕಾರರು ಜಮಾಯಿಸಲು ನಿರ್ಧರಿಸಲಾಗಿತ್ತು.
"ದೀಪಾವಳಿ ದಿನದಂದು ನಡೆಸಲುದ್ದೇಶಿಸಿರುವ ಪ್ರತಿಭಟನೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ" ಎಂದು ಮೇಯರ್ ಸಾದಿಕ್ ಖಾನ್ ಲಂಡನ್ ಅಸೆಂಬ್ಲಿ ಸದಸ್ಯ, ಭಾರತೀಯ ಮೂಲದ ನವೀನ್ ಶಾಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
"ಈ ರ್ಯಾಲಿಯು ಲಂಡನ್ ಜನರನ್ನು ಪ್ರತ್ಯೇಕಿಸಬಹುದು. ಈ ಕಾರಣಕ್ಕಾಗಿ ಈ ರ್ಯಾಲಿಯ ಆಯೋಜಕರು ಮತ್ತು ಪಾಲ್ಗೊಳ್ಳುವವರಲ್ಲಿ ಮತ್ತೊಮ್ಮೆ ಆಲೋಚಿಸುವಂತೆ ನಾನು ಮನವಿ ಮಾಡುತ್ತಿದ್ದೇನೆ" ಎಂದವರು ಹೇಳಿದ್ದಾರೆ.
Next Story