ಮಹಾರಾಷ್ಟ್ರ, ಹರ್ಯಾಣ: ಮತದಾನೋತ್ತರ ಸಮೀಕ್ಷೆ ಪ್ರಕಟ
ಯಾರಿಗೆ ಎಷ್ಟು ಸ್ಥಾನ?, ಯಾರಿಗೆ ಅಧಿಕಾರ?; ಇಲ್ಲಿದೆ ಸಂಪೂರ್ಣ ವಿವರ

ಹೊಸದಿಲ್ಲಿ, ಅ.21: ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ನಡೆದಿದ್ದು, ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿಯೇ ಅಧಿಕಾರ ಹಿಡಿಯಲಿದೆ.
ಎನ್ ಡಿಟಿವಿ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 211 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ - ಎನ್ ಸಿಪಿ 64 ಸೀಟುಗಳನ್ನು ಗೆಲ್ಲಲಿದೆ.
ಹರ್ಯಾಣದಲ್ಲಿ ಬಿಜೆಪಿ 90 ಸೀಟುಗಳ ಪೈಕಿ 66ರಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 14 ಕ್ಷೇತ್ರಗಳನ್ನು ಗೆಲ್ಲಲಿದೆ.
ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 71 ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 11 ಸೀಟುಗಳನ್ನು ಗೆಲ್ಲಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 230 ಸೀಟುಗಳನ್ನು ಮತ್ತು ಕಾಂಗ್ರೆಸ್-ಎನ್ ಸಿಪಿ ಮೈತ್ರಿ 48 ಸೀಟುಗಳನ್ನು ಗೆಲ್ಲಲಿದೆ.
ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಹರ್ಯಾಣದಲ್ಲಿ ಬಿಜೆಪಿ 52 ಸೀಟುಗಳನ್ನು ಮತ್ತು ಕಾಂಗ್ರೆಸ್ 19 ಸೀಟುಗಳನ್ನು ಗೆಲ್ಲಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 216 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದರೆ, ಕಾಂಗ್ರೆಸ್ ಎನ್ ಸಿಪಿ 65 ಸೀಟುಗಳನ್ನು ಗೆಲ್ಲಲಿದೆ.
ಇಂಡಿಯಾ ಟುಡೆ-ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ 166ರಿಂದ 194 ಸೀಟುಗಳನ್ನು ಮತ್ತು ಕಾಂಗ್ರೆಸ್-ಎನ್ ಸಿಪಿ ಮೈತ್ರಿ 72ರಿಂದ 90 ಸೀಟುಗಳನ್ನು ಗೆಲ್ಲಲಿದೆ.
ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಪ್ರಕಾರ ಮಹಾರಾಷ್ಟ್ರದಲ್ಲಿ ಬಿಜೆಪಿ 192ರಿಂದ 216 ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 55ರಿಂದ 81ಸೀಟುಗಳನ್ನು ಗೆಲ್ಲಲಿದೆ.







