Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿ ಸರಕಾರದ ಆಡಳಿತದಲ್ಲಿ ವಿಶ್ವ...

ಮೋದಿ ಸರಕಾರದ ಆಡಳಿತದಲ್ಲಿ ವಿಶ್ವ ಸೂಕ್ಷ್ಮತೆ ಸೂಚ್ಯಂಕದಲ್ಲಿ ತೀವ್ರ ಹದಗೆಟ್ಟ ಭಾರತದ ಸ್ಥಾನ

ನಾಗರಿಕ ಯುದ್ಧದ ಅಪಾಯ

ದೇವ್ ಕರ್, Theprint.inದೇವ್ ಕರ್, Theprint.in21 Oct 2019 7:54 PM IST
share
ಮೋದಿ ಸರಕಾರದ ಆಡಳಿತದಲ್ಲಿ ವಿಶ್ವ ಸೂಕ್ಷ್ಮತೆ ಸೂಚ್ಯಂಕದಲ್ಲಿ ತೀವ್ರ ಹದಗೆಟ್ಟ ಭಾರತದ ಸ್ಥಾನ

ಫ್ರೆಜಿಲಿಟಿ ಅಥವಾ ಸೂಕ್ಷ್ಮತೆಯು ದೇಶವೊಂದನ್ನು ಬಲಗೊಳಿಸುವ ಅಥವಾ ದುರ್ಬಲಗೊಳಿಸುವ ಹಲವಾರು ಆರ್ಥಿಕ, ಸಾಮಾಜಿಕ, ಜನಸಂಖ್ಯಾಕೀಯ, ರಾಜಕೀಯ, ಪರಿಸರ ಮತ್ತು ಭದ್ರತೆ ಸಂಬಂಧಿತ ಒತ್ತಡದ ಅಂಶಗಳನ್ನೊಳಗೊಂಡ ವ್ಯವಹಾರಗಳ ಸ್ಥಿತಿಯಾಗಿದೆ. ವಿಶ್ವಾದ್ಯಂತದ ದೇಶಗಳು ವಿವಿಧ ಕಾಲಘಟ್ಟಗಳಲ್ಲಿ ಹಲವಾರು ಒತ್ತಡಗಳಿಗೆ ಒಳಗಾಗುತ್ತವೆ ಮತ್ತು ಇವು ಅವುಗಳ ಸೂಕ್ಷ್ಮತೆಯಲ್ಲಿ ಬದಲಾವಣೆಗಳನ್ನು ತರುತ್ತಲೇ ಇರುತ್ತವೆ. ಸೂಕ್ಷ್ಮತೆಯ ಮೇಲೆ ನಿಗಾಯಿರಿಸದಿದ್ದರೆ,ಅದನ್ನು ನಿಯಂತ್ರಿಸದಿದ್ದರೆ ದೇಶವು ನಾಗರಿಕ ಯುದ್ಧ ಮತ್ತು ವಿಭಜನೆಯ ಅಪಾಯಗಳಿಗೆ ಸಿಲುಕುತ್ತದೆ.

 ಸಮಗ್ರ ಸೂಕ್ಷ್ಮ ದೇಶಗಳ ಸೂಚ್ಯಂಕ (ಎಫ್‌ಎಸ್‌ಐ)ವನ್ನು ಜನಸಂಖ್ಯಾಕೀಯ ಒತ್ತಡ, ಆರ್ಥಿಕ ಅಸಮಾನತೆ, ಅರ್ಥವ್ಯವಸ್ಥೆ, ಬಾಹ್ಯ ಹಸ್ತಕ್ಷೇಪಗಳಂತಹ 12 ಕ್ಷೇತ್ರಗಳ ಉಪಸೂಚ್ಯಂಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.

2018ರ ಎಫ್‌ಎಸ್‌ಐನಂತೆ ದಕ್ಷಿಣ ಸುಡಾನ್, ಸೊಮಾಲಿಯಾ,ಯೆಮನ್,ಸಿರಿಯಾ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಇವು ಐದು ಅತ್ಯಂತ ಸೂಕ್ಷ್ಮ ದೇಶಗಳಾಗಿವೆ. ಸೂಚ್ಯಂಕದ ಇನ್ನೊಂದು ತುದಿಯಲ್ಲಿ ನಾರ್ಡಿಕ್ ರಾಷ್ಟ್ರಗಳು, ಸಿಂಗಾಪುರ ಮತ್ತು ಇತರ ಮುಂದುವರಿದ ರಾಷ್ಟ್ರಗಳಂತಹ ಪ್ರಬಲ ಪ್ರಜಾಪ್ರಭುತ್ವಗಳಿವೆ.

 2006ರಲ್ಲಿ ಎಫ್‌ಎಸ್‌ಐನಲ್ಲಿ ಭಾರತದ ಸೂಕ್ಷ್ಮತೆಯು 93ನೇ ಸ್ಥಾನದಲ್ಲಿದ್ದರೆ, 2018ರಲ್ಲಿ ಅದು ಏರಿಕೆಯಾಗಿ 72ನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಭಾರತ 21 ಸ್ಥಾನಗಳ ಏರಿಕೆಗೆ ಹೆಚ್ಚುತ್ತಿರುವ ಆದಾಯ ಅಸಮಾನತೆಯಂತಹ ಅಸಮ ಅಭಿವೃದ್ಧಿ,ಪ್ರತಿಭಾ ಪಲಾಯನ,ದೇಶ ನ್ಯಾಯಸಮ್ಮತತೆ, ಜನಸಂಖ್ಯಾಕೀಯ ಒತ್ತಡಗಳು ಮತ್ತು ಭದ್ರತಾ ವ್ಯವಸ್ಥೆ ಇತ್ಯಾದಿಗಳು ಪ್ರಮುಖ ಕಾರಣಗಳಾಗಿವೆ. ಇವುಗಳನ್ನು ಇಲ್ಲಿ ವಿವರಿಸಲಾಗಿದೆ:

ಅಸಮ ಅಭಿವೃದ್ಧಿ: ಇದು ಆರ್ಥಿಕ ಬೆಳವಣಿಗೆಯ ದರವನ್ನು ಪರಿಗಣಿಸದೆ ಆದಾಯ ಹಂಚಿಕೆಯಲ್ಲಿನ ಅಸಮಾನತೆಯನ್ನು ಒಳಗೊಂಡಿರುತ್ತದೆ. ಭಾರತವು ವಿಶ್ವದಲ್ಲಿಯೇ ಅತ್ಯಂತ ಅಸಮಾನ ಆದಾಯ ಹಂಚಿಕೆಯ ದೇಶಗಳಲ್ಲೊಂದಾಗಿದೆ. ಅಸಮಾನ ಅಭಿವೃದ್ಧಿಯ ಸೂಚಕವು ವಾಸ್ತವ ಅಸಮಾನತೆಯನ್ನು ಪರಿಗಣಿಸುವುದು ಮಾತ್ರವಲ್ಲ,ಅದು ಗುಂಪುಗಳ ದೂರುಗಳಿಗೆ ಪೂರಕವಾಗುವ ಅಥವಾ ಗುಂಪುಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸುವ ಅಸಮಾನತೆಯ ದೃಷ್ಟಿಕೋನಗಳ ಗುಣಾತ್ಮಕ ಮೌಲ್ಯಮಾಪನವನ್ನೂ ಮಾಡುತ್ತದೆ. ಈ ಸೂಚಕವು ಉಚಿತ ಶಿಕ್ಷಣದ ಹರವು,ಸಮಾನ ಶಿಕ್ಷಣಾವಕಾಶ,ಬಡವರಿಗೆ ನ್ಯಾಯೋಚಿತ ವಸತಿ ಸೌಲಭ್ಯ,ಉದ್ಯೋಗ ತರಬೇತಿಗಳಂತಹ ಆರ್ಥಿಕ ಅವಕಾಶಗಳ ಮಾಪನವನ್ನೂ ಮಾಡುತ್ತದೆ.

ಪ್ರತಿಭಾ ಪಲಾಯನ: ಅಮೆರಿಕದ ಎಚ್1-ಬಿ ವೀಸಾಗಳಿಗಾಗಿ ಹೆಚ್ಚುತ್ತಿರುವ ಅರ್ಜಿಗಳು,ಮೆಕ್ಸಿಕೋದ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವ ಭಾರತೀಯರ ಹೆಚ್ಚುತ್ತಿರುವ ಪ್ರಮಾಣ ಇವು ಪ್ರತಿಭಾ ಪಲಾಯನಕ್ಕೆ ಭಾಗಶಃ ಸಾಕ್ಷಗಳಾಗಿವೆ.

ದೇಶ ನ್ಯಾಯಸಮ್ಮತತೆ: ಇದು ಸರಕಾರದ ಮುಕ್ತತೆಯ (ಉದಾ:ಕಾರ್ಯಾಚರಣೆಗಳ ಪಾರದರ್ಶಕತೆ) ಹರವನ್ನು ಪರಿಗಣಿಸುತ್ತದೆ. ಅಧಿಕಾರಕ್ಕೆ ನಿಕಟವಾಗಿರುವ ಉನ್ನತ ವ್ಯಕ್ತಿಗಳು ತಮ್ಮ ಉದ್ಯಮಗಳು ಮತ್ತು ತೆರಿಗೆಗೆ ಸಂಬಂಧಿಸಿದ ಪಾರದರ್ಶಕತೆಗೆ ಹೇಗೆ ಮುಕ್ತ ಮನಸ್ಸು ಹೊಂದಿದ್ದಾರೆ,ಅವರು ತೆರಿಗೆ ವಂಚನೆ,ಭ್ರಷ್ಟಾಚಾರದಂತಹ ಅರೋಪಗಳಲ್ಲಿ ಉತ್ತರದಾಯಿಗಳಾಗಿದ್ದಾರೆಯೇ ಇತ್ಯಾದಿ ಅಂಶಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯ ಸಂಸ್ಥೆಗಳಲ್ಲಿ ಜನರ ವಿಶ್ವಾಸ,ದಂಗೆಗಳು ಮತ್ತು ಕ್ರಾಂತಿಗಳು ಸಂಭವಿಸುತ್ತಿವೆಯೇ, ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿವೆ ಎಂದು ಜನರು ಭಾವಿಸಿದ್ದಾರೆಯೇ ಇತ್ಯಾದಿ ಅಂಶಗಳನ್ನೂ ದೇಶ ನ್ಯಾಯಸಮ್ಮತತೆಯು ಪರಿಗಣಿಸುತ್ತದೆ.

ಜನಸಂಖ್ಯಾಕೀಯ ಒತ್ತಡ: ಆಹಾರ ಪೂರೈಕೆ,ಶುದ್ಧ ಕುಡಿಯುವ ನೀರಿನ ಲಭ್ಯತೆ,ಶಕ್ತಿ ಅಗತ್ಯಗಳು ಮತ್ತು ಇತರ ಜೀವನ ಸುಸ್ಥಿರತೆಯ ಸಂಪನ್ಮೂಲಗಳ್ನು ಜನಸಂಖ್ಯಾಕೀಯ ಒತ್ತಡವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಸೂಚಕವು ಜನಸಂಖ್ಯಾಕೀಯ ಗುಣಲಕ್ಷಣಗಳನ್ನೂ ಪರಿಗಣಿಸುತ್ತದೆ.

ಉದಾಹರಣೆಗೆ ಭಾರತದ ಶೇ.50ಕ್ಕೂ ಅಧಿಕ ಜನರು 25 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದಾರೆ. ಜನಸಂಖ್ಯೆಯಲ್ಲಿ ಯುವಜನರ ಪಾಲು ಹೆಚ್ಚಿದ್ದರೆ ಅದನ್ನು ಜನಸಂಖ್ಯಾಕೀಯ ಡಿವಿಡೆಂಡ್ ಎಂದು ಕರೆಯಲಾಗುತ್ತದೆ. ಆದರೆ ಪೈಪೋಟಿಯಲ್ಲಿರುವ ಕೋಮುಗುಂಪುಗಳಲ್ಲಿ ತೀವ್ರ ವಿಭಿನ್ನ ಜನಸಂಖ್ಯಾ ಬೆಳವಣಿಗೆ ದರಗಳು ಗಾಢ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರಬಲ್ಲವು. ಅಲ್ಲದೆ ಯುವಜನರ ಹೆಚ್ಚಿನ ಜನಸಂಖ್ಯೆ ಹೆಚ್ಚು ಫಲದಾಯಕವಾಗಬಹುದು ಮತ್ತು ಅವರು ಮೊದಲು ಉದ್ಯೋಗವನ್ನು ಹುಡುಕಿಕೊಳ್ಳುವುದು ಅಗತ್ಯವಾಗಿದೆ.

ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಖಾಸಗಿ ಕ್ಷೇತ್ರವನ್ನು ಉತ್ತೇಜಿಸಲು ಸರಕಾರದ ನೀತಿಗಳಿಗೆ ಸಾಧ್ಯವಾಗದಿದ್ದರೆ ಜನಸಂಖ್ಯಾಕೀಯ ಡಿವಿಡೆಂಡ್ ಅಥವಾ ಲಾಭಾಂಶವು ಸುಲಭವಾಗಿ ಜನಸಂಖ್ಯಾಕೀಯ ಶಾಪವಾಗಿ ಬದಲಾಗುತ್ತದೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಸ್‌ಎಫ್‌ಐನಲ್ಲಿ ಭಾರತದ ಸ್ಥಾನ ಹದಗೆಟ್ಟಿದೆ ಎನ್ನುವುದು ಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. 2013ರಲ್ಲಿ 178 ದೇಶಗಳ ಪೈಕಿ ಭಾರತವು 79ನೇ ಸ್ಥಾನದಲ್ಲಿತ್ತು. ಅದು 2018ರಲ್ಲಿ 70ಕ್ಕೆ ಏರಿದೆ. ಕಾಂಗ್ರೆಸ್ ಆಡಳಿತದಲ್ಲಿಯೂ 2006ರ 93ರಿಂದ 2013ರಲ್ಲಿ 79ನೇ ಸ್ಥಾನಕ್ಕೆ ಏರಿತ್ತು.

share
ದೇವ್ ಕರ್, Theprint.in
ದೇವ್ ಕರ್, Theprint.in
Next Story
X