ನಿಗದಿತ ಸಮಯಕ್ಕೆ ಬಾರದ ಬಿಬಿಎಂಪಿ ಮೇಯರ್: ಸಭೆ ಬಹಿಷ್ಕರಿಸಿ ಹೊರನಡೆದ ಬಿಜೆಪಿ, ಕಾಂಗ್ರೆಸ್‌ನ ಮಾಜಿ ಮೇಯರ್‌ಗಳು
ಬೆಂಗಳೂರು, ಅ. 21: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾಗದೆ ಇರುವುದನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಮಾಜಿ ಮೇಯರ್‌ಗಳು ಸಭೆಯನ್ನೇ ಬಹಿಷ್ಕರಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12.30ಕ್ಕೆ ಮೇಯರ್ ಗೌತಮ್ ಕುಮಾರ್ ಅವರು ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮಾಜಿ ಮೇಯರ್‌ಗಳ ಸಭೆ ಕರೆದಿದ್ದರು. ಸಮಯಕ್ಕೆ ಸರಿಯಾಗಿ ಎಲ್ಲಾ ಮಾಜಿ ಮೇಯರ್‌ಗಳು, ಮೇಯರ್ ಅವರ ಕಚೇರಿಗೆ ಹಾಜರಾಗಿದ್ದರು.
ಸಮಯ 1:45 ಆದರೂ ಮೇಯರ್ ಅವರು ಈ ಸಭೆಗೆ ಹಾಜರಾಗಲೇ ಇಲ್ಲ. ಸುಮಾರು ಒಂದು ಕಾಲು ಗಂಟೆಗೂ ಹೆಚ್ಚು ಕಾಲ ಕಾದರೂ ಮೇಯರ್ ಅವರ ಸುಳಿವು ಇಲ್ಲದಿದ್ದನ್ನು ಕಂಡ ಮಾಜಿ ಮೇಯರ್‌ಗಳು ಮೇಯರ್ ಕಚೇರಿಯಿಂದ ಹೊರನಡೆದರು. ಮಾಜಿ ಮೇಯರ್‌ಗಳಾದ ಜೆ. ಹುಚ್ಚಪ್ಪ, ರಾಮಚಂದ್ರಪ್ಪ, ಎಸ್.ಕೆ. ನಟರಾಜ್, ಸಂಪತ್ ರಾಜ್, ಜಿ. ಪದ್ಮಾವತಿ, ಶಾಂತಕುಮಾರಿ ಸೇರಿದಂತೆ 10ಕ್ಕೂ ಹೆಚ್ಚು ಮಾಜಿ ಮೇಯರ್‌ಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.
Next Story