Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹುಲಿವೇಷ- ಜನಪ್ರಿಯ ದಾಟಿಯ ಕತೆಗಳು

ಹುಲಿವೇಷ- ಜನಪ್ರಿಯ ದಾಟಿಯ ಕತೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ22 Oct 2019 12:00 AM IST
share
ಹುಲಿವೇಷ- ಜನಪ್ರಿಯ ದಾಟಿಯ ಕತೆಗಳು

ಹುಲಿ ವೇಷ ಕರಾವಳಿಯಲ್ಲಿ ಜಾನಪದ ಕಲೆಯಂತೆಯೇ ಬೆಳೆದು ಬಂದಿದೆ. ವೃತ್ತಿ, ಧರ್ಮ, ಸಂಸ್ಕೃತಿ, ಮನರಂಜನೆ ಎಲ್ಲವೂ ಜೊತೆಯಾಗಿ ಮಿಳಿತಗೊಂಡಿರುವ ಕಲೆ ಇದು. ಮಕ್ಕಳ ಬಾಲ್ಯವನ್ನು ರಮ್ಯಗೊಳಿಸುವಲ್ಲಿ, ನವರಾತ್ರಿಯ ಹುಲಿವೇಷದ ಪಾತ್ರ ಬಹುದೊಡ್ಡದು. ಇಂತಹ ಹುಲಿವೇಷವನ್ನು ಇಟ್ಟುಕೊಂಡು ವಿಠಲ್ ಶೆಣೈ ಅವರು ಬರೆದ ನೀಳ್ಗತೆ ಅಥವಾ ಮಿನಿ ಕಾದಂಬರಿಯೇ ‘ಹುಲಿ ವೇಷ’. ಲೇಖಕರೇ ಹೇಳುವಂತೆ ಹುಲಿವೇಷದ ದಂಡನ್ನು ಆಧರಿಸಿ ಬರೆದ ಕತೆ ಸುದೀರ್ಘವಾಗಿ ಅತ್ತ ಸಣ್ಣ ಕತೆಯೂ ಆಗದೆ, ಕಾದಂಬರಿಯೂ ಆಗದೆ ಉಳಿದಾಗ ಅದರ ಜೊತೆಗೆ ಇನ್ನಷ್ಟು ಕತೆಗಳನ್ನು ಸೇರಿಸಿ ಅವರು ಸಂಕಲನ ತಂದಿದ್ದಾರೆ. ನೀಳ್ಗತೆಯ ಜೊತೆಗೆ ಆರು ಕತೆಗಳನ್ನು ಜೋಡಿಸಿದ್ದಾರೆ.

ಭಾನು ಶೆಟ್ಟಿ ಫ್ರೆಂಡ್ಸ್ ಸರ್ಕಲ್ ಹುಲಿಗಳು ಎಂದರೆ ಇಡೀ ಮಂಗಳೂರಿಗೆ ಫೇಮಸ್. 75 ವರ್ಷಗಳಿಂದ ಈ ತಂಡ ಮಂಗಳೂರಿನ ದಸರಾದ ಸಂಭ್ರಮವನ್ನು ಮೇಲೆತ್ತಿ ತೋರಿಸುತ್ತಿದೆ. ಪ್ರತಿ ವರ್ಷದ ಹಾಗೆ ಈ ಟ್ರೂಫ್ ಈ ಬಾರಿಯೂ ದಸರಾದಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲೇ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ. ಇವೆರಡನ್ನೂ ಜೊತೆಗೆ ತಂದು ಕತೆಯನ್ನು ಲೇಖಕರು ಬೆಳೆಸುತ್ತಾ ಹೋಗುತ್ತಾರೆ.

 ಗಾಯಕನೊಬ್ಬನ ಒಳದನಿಯನ್ನು ಹೇಳುವ ‘ಅದೇ ಧ್ವನಿ’, ಸರ್ಪ ದೋಷದ ಹಿನ್ನೆಲೆಯನ್ನು ಇಟ್ಟುಕೊಂಡು ಧನುಷ್‌ನ ಮಾನಸಿಕ ತಳಮಳವನ್ನು ಹೇಳುವ ‘ತಕ್ಷಕನ ದೋಷ’, ಕತ್ತಲ ಕೋಣೆಯೊಳಗಿನ ಕತೆಯನ್ನು ಹೇಳುವ ‘ಅವಳು, ಅವನು ಮತ್ತು ಕೋಣೆ’, ರಾತ್ರಿಯ ನಿದ್ದೆಯಿಲ್ಲದೆ ಬಳಲುತ್ತಿರುವ ಸುಮಂತ್ ಅದನ್ನು ಎದುರಿಸಲಾಗದೆ, ತನ್ನಂಥವರನ್ನೇ ಕೂಡಿಸಿಕೊಂಡು ನಡೆಸುವ ಹೋರಾಟವನ್ನು ಹೇಳುವ ‘ನಿ. ಹೀ. ಸಂ’., ಸುಜಾತಳ ಬಂಗಾರದ ಬಳೆಯ ಕನಸನ್ನು ನನಸು ಮಾಡುವ ನವೀನ್ ಪ್ರಯತ್ನಕ್ಕೆ ಸವಾಲಾಗುವ ವಿಧಿಯನ್ನು ಹೇಳುವ ‘ಬಂಗಾರದ ಬಳೆ’ ಸರಳ ಜನಪ್ರಿಯ ಓದನ್ನು ಬಯಸುವ ಓದುಗರಿಗೆ ಇಷ್ಟವಾಗಬಹುದು. ಒಂದು ರೀತಿಯಲ್ಲಿ ಎಲ್ಲವೂ ಸಮಯ ಕಳೆಯುವುದಕ್ಕಾಗಿ ಓದಬಹುದಾದ ಕತೆಗಳು. ಯಂಡಮೂರಿ ವೀರೇಂದ್ರನಾಥ್, ಕೆ. ಎನ್. ಗಣೇಶಯ್ಯ ಮೊದಲಾದವರ ಪ್ರಭಾವ ಲೇಖಕರ ಮೇಲೆ ಗಾಢವಾಗಿ ಬಿದ್ದಂತಿದೆ.

ಟೋಟಲ್ ಕನ್ನಡ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 206. ಮುಖಬೆಲೆ 160 ರೂ. ಆಸಕ್ತರು 98459 04451 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X