ಈ ಬಾರಿ ನಿಶ್ಯಬ್ದ ದೀಪಾವಳಿ !

ಹೊಸದಿಲ್ಲಿ, ಅ. 22: ಈ ಭಾರಿ ದೀಪಾವಳಿ ನಿಶ್ಯಬ್ದವಾಗಿ ನಡೆಯಲಿದೆ. ಯಾಕೆಂದರೆ, ಕೇವಲ ಎರಡು ಮಾದರಿಯ ನಿಶ್ಯಬ್ದ ಪಟಾಕಿಗಳನ್ನು ಮಾತ್ರ ಸುಪ್ರೀಂ ಕೋರ್ಟ್ ಕಾನೂನುಬದ್ಧ ಎಂದು ಘೋಷಿಸಿದೆ.
‘‘ಕೇವಲ ಪರಿಸರ ಸ್ನೇಹಿ ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಮಾರಾಟಗಾರರು ಇತರ ಮಾದರಿ ಪಟಾಕಿಗಳನ್ನು ಮಾರಾಟ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪತ್ತೆಯಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ದಿಲ್ಲಿ ಪೊಲೀಸ್ನ ವಕ್ತಾರ ರಾಂಧವ ತಿಳಿಸಿದ್ದಾರೆ. ಚಳಿಗಾಲ ಸಮೀಪಿಸುತ್ತಿರುವುದರಿಂದ ದಿಲ್ಲಿ ಹಾಗೂ ನೆರೆಯ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಕುಸಿಯುವ ಸಾಧ್ಯತೆ ಇರುವುದರಿಂದ ಪರಿಸರ ಸ್ನೇಹಿ ಪಟಾಕಿಗಳಿಗೆ ದಿಲ್ಲಿ ರಾಜ್ಯ ಸರಕಾರ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಈ ಪಟಾಕಿಗಳು ಶೇ. 20ರಿಂದ 30ಕ್ಕಿಂತ ಕಡಿಮೆ ಕಣಗಳು ಹಾಗೂ ಶೇ. 50ಕ್ಕಿಂತ ಕಡಿಮೆ ಸಲ್ಫರ್ ಡಯಾಕ್ಸೈಡ್ ಹೊಂದಿರಲಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಈ ಪಟಾಕಿಗಳನ್ನು ಕಳೆದ ವರ್ಷ ಅಭಿವೃದ್ಧಿಗೊಳಿಸಲಾಗಿತ್ತು.
Next Story