ಯಡಿಯೂರಪ್ಪ ಎಲ್ಲಿದ್ದಿಯಪ್ಪ?: ಕಾಂಗ್ರೆಸ್ ಪ್ರಶ್ನೆ
ರಾಜ್ಯದಲ್ಲಿ ಮಹಾ ಮಳೆ, ಪ್ರವಾಹ

ಬೆಂಗಳೂರು, ಅ.22: ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವರ ಸ್ಥಿತಿ ಕಷ್ಟಕರವಾಗಿರುವ ವಿಚಾರ ಪ್ರಸ್ತಾಪಿಸಿ ಯಡಿಯೂರಪ್ಪ ಎಲ್ಲಿದ್ದಿಯಪ್ಪ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಪ್ರವಾಹದ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ನಿಲ್ಲುವ ನೆಲೆಗೂ, ತಿನ್ನುವ ಆಹಾರಕ್ಕೂ ಪರದಾಟ ಶುರುವಾಗಿದೆ. ಸಂತ್ರಸ್ತರು ಯಡಿಯೂರಪ್ಪ ಎಲ್ಲಿದ್ದಿಯಪ್ಪ ಎಂದು ಕೂಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ, 25 ಮಂದಿ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆಯೇ, ಕೇಂದ್ರ, ರಾಜ್ಯ ಬಿಜೆಪಿ ಸರಕಾರಗಳು ಬದುಕಿವೆಯೇ ಎಂದು ಪ್ರಶ್ನಿಸಿ, ವಾಗ್ದಾಳಿ ನಡೆಸಿದೆ.
ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ.
— Karnataka Congress (@INCKarnataka) October 22, 2019
ನಿಲ್ಲುವ ನೆಲೆಗೂ, ತಿನ್ನುವ ಆಹಾರಕ್ಕೂ ಪರದಾಟ ಶುರುವಾಗಿದೆ.
ಸಂತ್ರಸ್ತರು ಕೂಗುತ್ತಿದ್ದಾರೆ, #ಯಡಿಯೂರಪ್ಪ_ಎಲ್ಲಿದ್ದಿಯಪ್ಪ?
ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ?
25 ಮಂದಿ ಬಿಜೆಪಿ ಸಂಸದರು ಕಾಣೆಯಾಗಿದ್ದಾರೆಯೇ?
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಬದುಕಿವೆಯೆ? #ಸಂತ್ರಸ್ತರನ್ನುಕಾಪಾಡಿ pic.twitter.com/ZeCEmd2A0c