ಬೋಟಿನಿಂದ ನೀರಿಗೆ ಬಿದ್ದು ಮೃತ್ಯು
ಮಲ್ಪೆ, ಅ.23: ಮಲ್ಪೆ ಬಂದರಿನಲ್ಲಿ ಬೋಟಿನಿಂದ ಮೀನು ಖಾಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಅ.22ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಮಲ್ಪೆ ಕೊಳ ನಿವಾಸಿ ಸ್ಟೆಲ್ಲಾಸ್ (42) ಎಂದು ಗುರುತಿಸಲಾಗಿದೆ. ಇವರು ರಾತ್ರಿ 8ಗಂಟೆ ಸುಮಾರಿಗೆ ಮಲ್ಪೆಬಂದರಿನ ಬಾಪುತೋಟ ದಕ್ಕೆಯಲ್ಲಿ ಕ್ರಿಸ್ತರೋಜಿಯಾನ್ ಗಿಲ್ನೆಟ್ ಬೋಟಿನಿಂದ ಮೀನು ಖಾಲಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆ ಯಾಗಿದ್ದರು. ಇವರ ಮೃತ ದೇಹ ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story