ಬಂಟ್ವಾಳ ತಾಲೂಕಿನ ಮೂವರು ಸಬ್ಇನ್ಸ್ಪೆಕ್ಟರ್ಗಳು ವರ್ಗಾವಣೆ

ಅವಿನಾಶ್ - ಮಂಜುಳ
ಬಂಟ್ವಾಳ, ಅ. 23: ಬಂಟ್ವಾಳ ತಾಲೂಕಿನ ಎರಡು ಠಾಣೆಯ ಮೂವರು ಸಬ್ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ಎಂದು ಆದೇಶ ಹೊರಡಿಸಿದೆ. ಬಂಟ್ವಾಳ ನಗರ ಠಾಣೆಯ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಇಬ್ಬರು ಎಸ್ಸೈಗಳನ್ನು ಮತ್ತು ವಿಟ್ಲ ಠಾಣೆಯ ಪಿಎಸ್ಸೈಯನ್ನು ವರ್ಗಾವಣೆ ಮಾಡುವ ಮೂಲಕ ದ.ಕ. ಜಿಲ್ಲೆಯ ವಿವಿಧೆ ಠಾಣೆಯ ವರ್ಗಾವರ್ಗಿಗೊಳಿಸಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಶೇಖರ್ ಅವರನ್ನು ವರ್ಗಾವಣೆಗೊಳಿಸಿ, ಧರ್ಮಸ್ಥಳ ಠಾಣೆಯ ಎಸ್ಸೈ ಅವಿನಾಶ್ ಅವರನ್ನು ಬಂಟ್ವಾಳ ನಗರ ಠಾಣೆಯ ಕಾನೂನು ಸುವ್ಯವಸ್ಥೆಗೆ ನಿಯುಕ್ತಿಗೊಳಿಸಲಾಗಿದೆ.
ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಸುಧಾಕರ ತೋನ್ಸೆ ಅವರನ್ನು ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಹಾಗೂ ವಿಟ್ಲ ಠಾಣೆಯ ಎಸ್ಸೈ ಯಲ್ಲಪ್ಪ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ, ದ.ಕ.ಜಿಲ್ಲೆಯ ಡಿಎಸ್ಬಿ ಘಟಕದ ಎಸ್ಸೈ ಆಗಿದ್ದ ಮಂಜುಳಾ ಕೆ.ಎಂ. ಅವರನ್ನು ಮರಳಿ ಬಂಟ್ವಾಳ ಟ್ರಾಫಿಕ್ ಠಾಣೆಗೆ ನಿಯುಕ್ತಿಗೊಳಿಸಿ ಎಂದು ಆದೇಶ ಹೊರಡಿಸಿದೆ.
ಬಂಟ್ವಾಳ ನಗರ ಠಾಣೆಯ ಎಸ್ಸೈ ಚಂದ್ರಶೇಖರ್ ಅವರಿಗೆ ಸ್ಥಳ ಸೂಚಿಸಿಲ್ಲ ಹಾಗೂ ವಿಟ್ಲ ಠಾಣೆ, ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗಕ್ಕೆ ಯಾರನ್ನು ನಿಯುಕ್ತಿಗೊಳಿಸಲಾಗಿಲ್ಲ.







