ಎಸ್ ಡಿಟಿಯು ಯೂನಿಯನ್ ಸುಳ್ಯ ತಾಲೂಕು ಸಮಿತಿ ಅಸ್ತಿತ್ವಕ್ಕೆ
ಮಂಗಳೂರು: ಸೋಷಿಯಲ್ ಡೆಮೋಕ್ರೆಟಿಕ್ ಟ್ರೇಡ್ ಯೂನಿಯನ್ ಇದರ ನೂತನ ಸುಳ್ಯ ತಾಲೂಕು ಸಮಿತಿ ರಚಿಸಲಾಯಿತು.
ನೂತನ ತಾಲೂಕು ಅಧ್ಯಕ್ಷರಾಗಿ ಫೈಝಲ್ ಬೆಳ್ಳಾರೆ ಆಯ್ಕೆಯಾದರು. ಉಳಿದಂತೆ ಉಪಾಧ್ಯಕ್ಷರಾಗಿ ಆಶಿರ್ ಎ. ಬಿ, ಕಾರ್ಯದರ್ಶಿ ಯಾಗಿ ಕಬೀರ್ ಎಂ.ಎಚ್, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಪಿ. ಕೆ, ಕೋಶಾಧಿಕಾರಿಯಾಗಿ ಅಬ್ದುಲ್ ರೆಹಮಾನ್ ಹಾಗೂ ಸಮಿತಿ ಸದಸ್ಯರುಗಳಾಗಿ ಶಹಜಾದ್ ಸುಳ್ಯ, ಸುಲೈಮಾನ್, ರಶೀದ್ ಪಾಲ್ತಾಡು, ಬಶೀರ್ ಎಸ್. ಎಂ, ಮಜೀದ್ ನೆಟ್ಟಾರು ಆಯ್ಕೆಯಾದರು.
ನೂತನ ಸಮಿತಿ ರಚನೆಯ ಸಭೆಯಲ್ಲಿ ವೀಕ್ಷಕರಾಗಿ ಎಸ್ ಡಿಟಿಯು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಅವರು ಉಪಸ್ಥಿತರಿದ್ದರು . ಸಭೆಯ ವಿಶೇಷ ಅತಿಥಿಗಳಾಗಿ ಎಸ್ಡಿಪಿಐ ಸುಳ್ಯ ವಿಧಾನ ಸಭೆ ಕಾರ್ಯದರ್ಶಿಗಳಾದ ಮುಸ್ತಫ ಎಂ.ಕೆ, ಎಸ್ಡಿಪಿಐ ಸುಳ್ಯ ನಗರ ಅಧ್ಯಕ್ಷರಾದ ಕಲಾಂ ಸುಳ್ಯ, ಎಸ್ ಡಿಟಿಯು ಜಿಲ್ಲಾ ಸಮಿತಿ ಸದಸ್ಯರಾದ ಹಮೀದ್ ಪೆರಾಜೆ ಉಪಸ್ಥಿತರಿದ್ದರು.
Attachments area
Next Story