ಭಾರೀ ಗಾಳಿಮಳೆ: ಪೈವಳಿಕೆಯಲ್ಲಿ ಕುಸಿದ ಮತ ಎಣಿಕೆ ಕೇಂದ್ರದ ಚಪ್ಪರ

ಕಾಸರಗೋಡು, ಅ.24: ಕರಾವಳಿಯಲ್ಲಿ ಗುರುವಾರ ಬೆಳಗ್ಗೆಯಿಂದ ಭಾರೀ ಮಳೆ ಸುರಿಯುತ್ತಿದೆ. ಗಾಳಿಮಳೆಗೆ ಸಿಲುಕಿ ಮಂಜೇಶ್ವರ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಕೇಂದ್ರವಾಗಿರುವ ಪೈವಳಿಕೆ ನಗರ ಶಾಲೆಯಲ್ಲಿ ಹಾಕಲಾಗಿದ್ದ ಚಪ್ಪರ ಕುಸಿದಿದೆ.
ಮತ ಎಣಿಕೆ ಮುಗಿಯುತ್ತಿದ್ದಂತೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಚಪ್ಪರದ ತಗಡು ಶೀಟುಗಳು ಹಾರಿ ಹೋಗಿವೆ. ಕುರ್ಚಿಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿವೆ.











