ಇರಾ: ಗಾಳಿಮಳೆಗೆ ಕುಸಿದ ಮದ್ರಸದ ಶೌಚಾಲಯ; ಮನೆಗೆ ಹಾನಿ
![ಇರಾ: ಗಾಳಿಮಳೆಗೆ ಕುಸಿದ ಮದ್ರಸದ ಶೌಚಾಲಯ; ಮನೆಗೆ ಹಾನಿ ಇರಾ: ಗಾಳಿಮಳೆಗೆ ಕುಸಿದ ಮದ್ರಸದ ಶೌಚಾಲಯ; ಮನೆಗೆ ಹಾನಿ](https://www.varthabharati.in/sites/default/files/images/articles/2019/10/24/216222-1571908131.gif)
ಕೊಣಾಜೆ, ಅ.24: ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು ಎಂಬಲ್ಲಿ ಮದ್ರಸವೊಂದರ ಶೌಚಾಲಯ ಕಟ್ಟಡವು ಗಾಳಿಮಳೆಗೆ ಕುಸಿದು ಬಿದ್ದ ಪರಿಣಾಮ ಸಮೀಪದ ಮನೆಗೆ ಹಾನಿಯಾದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಬುಧವಾರ ರಾತ್ರಿಯಿಂದ ಈ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಪರಿಣಾಮ ಪಂಜಿಕಲ್ಲು ದರ್ಬಾಲ ಕಂಪೌಂಡ್ ಬಳಿ ಇರುವ ಮದ್ರಸವೊಂದರ ಶೌಚಾಲಯ ಕಟ್ಟಡವು ಸಮೀಪದ ಅಹ್ಮದ್ ಬಾವ ಎಂಬವರ ಮನೆಗೆ ಕುಸಿದು ಬಿದ್ದಿದೆ. ಕುಸಿತದಿಂದಾಗಿ ಮನೆಯ ಕಿಟಕಿ ಹಾಗೂ ಗೋಡೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
Next Story