ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ವೃದ್ದೆ

ಚಿಕ್ಕಮಗಳೂರು, ಅ.24: ವೇದಾವತಿ ನದಿಯಲ್ಲಿ ನೀರಿನ ಆರ್ಭಟಕ್ಕೆ ವೃದ್ದೆ ಕೊಚ್ಚಿ ಹೋದ ಘಟನೆ ಕಡೂರು ತಾಲೂಕಿನ ಮಲ್ಲಿದೇವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕರಿಯಮ್ಮ (70) ನೀರು ಪಾಲಾದ ವೃದ್ಧೆ. ಬಯಲು ಸೀಮೆ ಭಾಗಕ್ಕೆ ನೀರು ಹರಿದು ಬಂದಿದ್ದು, ನೀರು ನೋಡಲು ಹೋಗಿದ್ದ ವೃದ್ದೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Next Story





