ಕೇರಳ: ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರ 'ಜೈ' ಎಂದದ್ದು ಯಾರಿಗೆ ?; ಇಲ್ಲಿದೆ ಸಂಪೂರ್ಣ ವಿವರ
ವಟ್ಟಿಯೂರ್ಕಾವ್, ಮಂಜೇಶ್ವರದಲ್ಲಿ ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ

ಶಾನಿಮೋಲ್ ಉಸ್ಮಾನ್
ತಿರುವನಂತಪುರಂ: ಕೇರಳದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯು ಅಕ್ಷರಶಃ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿತ್ತು. ಈ ವರ್ಷ ಮೂರು ಪ್ರಮುಖ ಪಕ್ಷಗಳು ಮಂಜೇಶ್ವರಂ, ಎರ್ನಾಕುಲಂ, ಕೊನ್ನಿ, ಅರೂರ್ ಮತ್ತು ವಟ್ಟಿಯೂರ್ಕಾವ್ ಕ್ಷೇತ್ರಗಳಲ್ಲಿ ಬಲವಾದ ಪ್ರಚಾರವನ್ನು ಕೂಡ ಮಾಡಿದ್ದವು. ಆದರೆ ಮತದಾನದ ದಿನದಂದು, ಅನಿರೀಕ್ಷಿತ ಮಳೆಯ ಮುನ್ಸೂಚನೆಗಳು ಮತದಾನದಲ್ಲಿ ಏರಿಳಿತ ಉಂಟಾಗುವ ಮುನ್ಸೂಚನೆ ನೀಡಿದ್ದವು.
ಈ ಬಾರಿ ಸಮುದಾಯ ಮುಖಂಡರಿಗೆ ಯಾವುದೇ ಬೆಂಬಲವೂ ಇರಲಿಲ್ಲ. ಅಭ್ಯರ್ಥಿಯ ನಿರ್ಣಯಿಸುವ ವಿಚಾರದಲ್ಲಿನ ನಿರ್ಧಾರದ ನ್ಯೂನತೆಯು ಬಿಜೆಪಿಯ ಶಕ್ತಿ ಕೇಂದ್ರ ಎಂದು ಪರಿಗಣಿಸಲ್ಪಟ್ಟ ವಟ್ಟಿಯೂರ್ಕಾವಿನಲ್ಲೂ ಪ್ರತಿಫಲಿಸಿದೆ.
ಮಂಜೇಶ್ವರಂ
ಈ ಹಿಂದೆ ಶಾಸಕರಾಗಿದ್ದ ಪಿಬಿ ಅಬ್ದುರ್ರಝಾಕ್ ಅವರ ನಿಧನದ ನಂತರ ಮಂಜೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಿತು. 2016ರ ಚುನಾವಣೆಯಲ್ಲಿ ವಿದೇಶಗಳಲ್ಲಿ ಇರುವವರು ಮತ್ತು ಮೃತಪಟ್ಟ 291 ಜನರ ಹೆಸರಲ್ಲಿ ಕಳ್ಳ ಮತದಾನ ಮೂಲಕ ಪಿಬಿ ಅಬ್ದುರ್ರಝಾಕ್ ಜಯಗಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ನ್ಯಾಯಾಲಯಕ್ಕೆ ಹಾಜರಾದಾಗ ಮಂಜೇಶ್ವರಂ ಕ್ಷೇತ್ರವು ಸುದ್ದಿಯ ಕೇಂದ್ರ ಬಿಂದುವಾಗಿ ಮಾರ್ಪಟ್ಟಿತ್ತು. ಪ್ರಕರಣ ತೀರ್ಮಾನವಾಗುವ ಮುನ್ನ ಅಬ್ದುರ್ರಝಾಕ್ ನಿಧನರಾಗಿದ್ದರು.
ಉಪಚುನಾವಣೆ ಘೋಷಿಸಿದಾಗ ಯುಡಿಎಫ್ನ ಎಂ.ಸಿ.ಖಮರುದ್ದೀನ್, ಎಲ್ಡಿಎಫ್ನ ಶಂಕರ್ ರೈ ಮತ್ತು ರವಿಶ್ ತಂತ್ರಿ ಎನ್ಡಿಎ ಅಭ್ಯರ್ಥಿ ಗಳಾಗಿ ಸ್ಪರ್ಧಿಸಿದ್ದು, ಎಂ.ಸಿ.ಖಮರುದ್ದಿನ್ 65,407 ಮತಗಳೊಂದಿಗೆ ಜಯಗಳಿಸಿದ್ದಾರೆ. ರವಿಶ್ ತಂತ್ರಿ 57,484 ಮತ್ತು ಶಂಕರ್ ರೈ 38,233 ಮತಗಳನ್ನು ಪಡೆದರು. ಖಮರುದ್ದೀನ್ 7923 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎರ್ನಾಕುಳಂ
ಪ್ರತಿಕೂಲ ರಾಜಕೀಯ ವಾತಾವರಣದಲ್ಲಿಯೂ ಯುಡಿಎಫ್ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಯುಡಿಎಫ್ ಅಭ್ಯರ್ಥಿ ಟಿ.ಜೆ. ವಿನೋದ್ 3,750 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹೈಬಿ ಈಡನ್ 21,949 ಮತಗಳಿಂದ ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು.
ಈ ಗೆಲುವನ್ನು ಎರ್ನಾಕುಲಂನ ಜನರು ಮತ್ತು ಯುಡಿಎಫ್ ಕಾರ್ಯಕರ್ತರಿಗೆ ಸಮರ್ಪಿಸುತ್ತಿದ್ದೇನೆ ಎಂದು ಟಿ.ಜೆ.ವಿನೋದ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊನ್ನಿ
ಉಪಚುನಾವಣೆಯಲ್ಲಿ ಕೊನ್ನಿ ವಿಧಾನ ಸಭಾ ಕ್ಷೇತ್ರವು ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿತ್ತು. ಶಬರಿಮಲೆ ವಿಚಾರವನ್ನು ಮತಗಳಾಗಿ ಪರಿವರ್ತಿಸುವ ಕನಸು ಕಂಡಿದ್ದ ಬಿಜೆಪಿಯು ಕೆ. ಸುರೇಂದ್ರನ್ರನ್ನು ಕರೆತಂದಿತು. ಇದೀಗ ಕೊನ್ನಿ ಕ್ಷೇತ್ರವು 23 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೊಮ್ಮೆ ಕೆಂಪು ಬಣ್ಣದಲ್ಲಿ ಕಂಗೊಳಿಸಲು ಸಜ್ಜಾಗಿದೆ. ಎಲ್ಡಿಎಫ್ನ ಕೆ.ಯು.ಜನೇಶ್ ಕುಮಾರ್ 54,099 ಮತಗಳಿಂದ ಚುನಾವಣೆಯಲ್ಲಿ ಜಯಗಳಿಸಿದ್ದು, 1996 ರಿಂದ 2019ರವರೆಗೆ ಅಡೂರ್ ಪ್ರಕಾಶ್ ಅವರ ಕ್ಷೇತ್ರವಾಗಿದ್ದ ಕೊನ್ನಿಯು ಇದೀಗ ಎಡಕ್ಕೆ ಸರಿದಿದೆ.
ಯುಡಿಎಫ್ ಅಭ್ಯರ್ಥಿ ಮೋಹನ್ರಾಜ್ 44,146 ಮತಗಳನ್ನು ಪಡೆದರೆ, ಎನ್ಡಿಎಯ ಕೆ.ಸುರೇಂದ್ರನ್ 39,786 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ತೃಪ್ತಿಪಟ್ಟಿದ್ದಾರೆ.
ಅರೂರ್
ಎ.ಎಂ.ಆರಿಫ್ ಆಲಪ್ಪುಳ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅರೂರ್ ಉಪಚುನಾವಣೆ ನಡೆದಿದ್ದು, 59 ವರ್ಷಗಳ ಸುದೀರ್ಘ ಕಾಲಾವಧಿಯ ಬಳಿಕ, ಯುಡಿಎಫ್ನ ಶಾನಿಮೋಲ್ ಉಸ್ಮಾನ್ ಮೂಲಕ ಅರೂರ್ ಯುಡಿಎಫ್ ಪಾಲಾಗಿದೆ. ಶನಿಮೋಲ್ ಉಸ್ಮಾನ್ ಎಲ್ಡಿಎಫ್ ಅಭ್ಯರ್ಥಿ ಮನು ಸಿ. ಪುಲಿಕಲ್ರನ್ನು 1992 ಮತಗಳಿಂದ ಸೋಲಿಸಿದರು.
ಎಡಪಂಥೀಯರ ಪ್ರಾಬಲ್ಯವಿರುವ ಈ ಕ್ಷೇತ್ರದ ಗೆಲುವು ಶಾನಿಮೋಲ್ಗೆ ಸಣ್ಣ ಸವಾಲಾಗಿರಲಿಲ್ಲ. ಅರೂರ್ನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನ ಅಂದರೆ ಶೇ .80.47 ರಷ್ಟು ಮತದಾನ ದಾಖಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ, ಶಾನಿಮೋಲ್ ಆಲಪ್ಪುಳ ಲೋಕಸಭಾ ಕ್ಷೇತ್ರವನ್ನು ಕಳಕೊಂಡಿದ್ದರು.
ವಟ್ಟಿಯೂರ್ಕಾವ್
ಎಲ್ಲಾ ಐದು ಸ್ಥಳಗಳ ಪೈಕಿ ವಟ್ಟಿಯೂರ್ಕಾವ್ ಅತಿದೊಡ್ಡ ಕ್ಷೇತ್ರವಾಗಿತ್ತು. ಎಲ್ಡಿಎಫ್ ತಿರುವನಂತಪುರಂ ಕಾರ್ಪೊರೇಶನ್ ಮೇಯರ್ ವಿ.ಕೆ.ಪ್ರಸಾಂತ್ ಅವರ ಮೂಲಕ ಇಲ್ಲಿ ಚುಣಾವಣೆ ಎದುರಿಸಿದ್ದು, ಪ್ರವಾಹ ಮತ್ತು ಮೆಟ್ರೋದ ಪ್ರಶಂಸನೀಯ ಕಾರ್ಯಗಳು ಅನುಕೂಲ ಕರವಾಗಲಿದೆ ಎಂದು ಎಡರಂಗವು ಲೆಕ್ಕಹಾಕಿತು. ಅದು ತಪ್ಪಾಗಲಿಲ್ಲ ಮಾತ್ರವಲ್ಲ, ವಿ.ಕೆ.ಪ್ರಶಾಂತ್ ಅವರು ಬಾರೀ ಬಹುಮತದೊಂದಿಗೆ ಗೆದ್ದರು.
ಬಲವಾದ ತ್ರಿಕೋನ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದ ವತ್ತಿಯೂರ್ಕಾವ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ಎಸ್.ಸುರೇಶ್ ಕಣಕ್ಕೆ ಇಳಿದಿದ್ದರು. ಕುಮ್ಮನಂ ಅವರ ನಿರೀಕ್ಷೆಯಲ್ಲಿದ್ದ ಆರ್ಎಸ್ಎಸ್ಗೆ ಸುರೇಶ್ ಹೆಚ್ಚು ಹಿಡಿಸಿರಲಿಲ್ಲ ಎನ್ನಲಾಗಿದ್ದು, ಇದು ಪ್ರಚಾರದ ಆರಂಭದಲ್ಲಿಯೂ ಕಂಡು ಬಂದಿತ್ತು.
ಮೊದಲಿನಿಂದಲೂ, ವಟ್ಟಿಯೂರ್ಕಾವ್ ಬಗ್ಗೆ ಚರ್ಚೆಗಳು ನಡೆದಿದ್ದು, ಅಲ್ಲಿ ರಾಜಕೀಯ ಮತಗಳಿಗಿಂತ ಸಮುದಾಯಿಕ ಮತಗಳು ಪ್ರಭಾವಿತವಾಗಿವೆ. ಇದನ್ನು ಅನುಸರಿಸಿ ಕೆ.ಮೋಹನ್ಕುಮಾರ್ ಎನ್ಎಸ್ಎಸ್ ಆಶೀರ್ವಾದದೊಂದಿಗೆ ಯುಡಿಎಫ್ನ ಅಭ್ಯರ್ಥಿಯಾಗಿದ್ದರು. ಆದರೆ ಸಮ ದೂರ ಕರೆಯನ್ನು ಸ್ವೀಕರಿಸಲು ವತ್ತಿಯೂರ್ಕಾವುವಿನ ಮತದಾರರು ಸಿದ್ಧರಾಗದ ಕಾರಣ, ಪ್ರಶಾಂತ್ ಗೆಳುವು ಸಾಧ್ಯವಾಯಿತು. ಶಾಸಕ, ಕೆ.ಎಂ. ಮುರಳೀಧರನ್ ವಡಗರ ಲೋಕಸಭಾ ಕ್ಷೇತ್ರದ ಸಂಸದರಾದ ಬಳಿಕ ವಟ್ಟಿಯೂರ್ಕಾವ್ ಉಪಚುನಾವಣೆ ನಡೆಯಿತು.
ಅಂತಿಮವಾಗಿ ಫಲಿತಾಂಶಗಳನ್ನು ಘೋಷಿಸಿದಾಗ ಯುಡಿಎಫ್ -3, ಎಲ್ಡಿಎಫ್ -2 ಸ್ಥಾನಗಳನ್ನು ಪಡೆದಿವೆ.







