ಕಾಪು : ಅ. 25ರಂದು ವಿದ್ಯಾರ್ಥಿ ವೇತನ ವಿತರಣೆ
ಕಾಪು : ಜಮೀಯ್ಯತುಲ್ ಫಲಾಹ್ ಕಾಪು ತಾಲೂಕು ಘಟಕದ ವತಿಯಿಂದ ಅ. 25ರಂದು ಸಂಜೆ 4.30 ಕ್ಕೆ ಸಂಸ್ಥೆಯ ಕಚೇರಿಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಮುಹಮ್ಮದ್ ಇಕ್ಬಾಲ್ ಅದಮ್ ರವರ ಅಧ್ಯಕ್ಷತೆಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲ್ಪಡುವ ವಿದ್ಯಾರ್ಥಿ ವೇತನದ ಕಾರ್ಯಕ್ರಮದಲ್ಲಿ ಜೆ. ಎಫ್ ನ ಕೇಂದ್ರ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕೆ. ಕೆ., ಕಾಪು ತಾಲೂಕು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಕಾಪು ಸಿ. ಎ. ಬ್ಯಾಂಕ್ ನ ಉಪಾಧ್ಯಕ್ಷ ಮಾಧವ ಪಾಲನ್, ಜೆ. ಎಫ್. ನ ಏನ್. ಆರ್. ಸಿ. ಸಿ ಯ ನಿಕಟಪೂರ್ವ ಅಮೀರ್ ಎಸ್. ಎಮ್. ಜಾಫರ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ತಿಳಿಸಿರುವರು.
Next Story





