ಚರಂಡಿಗೆ ಬಿದ್ದು ಮೃತ್ಯು
ಉಡುಪಿ, ಅ.24: ವೃದ್ಧರೊಬ್ಬರು ಅಕಸ್ಮಿಕವಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಣಿಪಾಲದ ಕೋಡಂಗೆ ಎಂಬಲ್ಲಿ ನಡೆದಿದೆ.
ಮೃತರನ್ನು ಹೆರ್ಗ ಗ್ರಾಮದ ಸರಳೆಬೆಟ್ಟಿನ ಬಾಲಕೃಷ್ಣ ನಾಯ್ಕಿ (65) ಎಂದು ಗುರುತಿಸಲಾಗಿದೆ. ಇವರು ಬುದವಾರ ಸಂಜೆ 5 ಗಂಟೆಗೆ ಮಣಿಪಾಲಕ್ಕೆ ಹೋಗಿದ್ದು, ಮನೆಗೆ ಹಿಂದಿರುಗಿರಲಿಲ್ಲ. ಅವರ ಮೃತದೇಹ ಇಂದು ಬೆಳಗ್ಗೆ ಕೊಡಂಗೆ ಎಂಬಲ್ಲಿರುವ ಅಶ್ವಥಕಟ್ಟೆ ಸಮೀಪದ ರಸ್ತೆ ಬದಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಅವರು ಅಕಸ್ಮಿಕವಾಗಿ ಚರಂಡಿಗೆ ಮುಗುಚಿ ಬಿದ್ದು, ಚರಂಡಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬೇಕೆಂದು ಹೇಳಲಾಗಿದೆ. ಈ ಬಗ್ಗೆ ಮೃತರ ಪುತ್ರ ಪ್ರವೀಣ ನಾಯ್ಕೆ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





