ವಕ್ಫ್ ಇಲಾಖೆಯಿಂದ ಮಾಸಿಕ ಗೌರವಧನಳ ಮಾಹಿತಿ ನೀಡಲು ಇಮಾಮ್/ಮೌಝಿನ್‌ಗೆ ಸೂಚನೆ
ಮಂಗಳೂರು, ಅ. 24: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಗೌರವ ಧನ ಪಡೆಯುತ್ತಿರುವ ಪೇಶ್ ಇಮಾಮ್ ಮತ್ತು ಮೌಝನ್ (ಮುಕ್ರಿ)ಗಳು ಅಕ್ಟೋಬರ್ ತಿಂಗಳಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ತಾವು ಕೆಲಸ ಮಾಡುವ ಮಸೀದಿಯ ಅಧ್ಯಕ್ಷರು/ ಕಾರ್ಯದರ್ಶಿ ಯವರಿಂದ ದೃಢೀಕರಣ ಪತ್ರದ ಜೊತೆಗೆ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಝೆರಾಕ್ಸ್ ಪ್ರತಿಗಳನ್ನು (ಇಂದಿನವರೆಗೆ ಅಪ್‌ಡೇಟ್) ದ.ಕ. ಜಿಲ್ಲಾ ವಕ್ಫ್ ಕಚೇರಿಗೆ ಅ. 26ರೊಳಗೆ ದ್ವಿಪ್ರತಿಯಲ್ಲಿ ಕಡ್ಡಾಯವಾಗಿ ಖುದ್ದು ತಾವೇ ಸಲ್ಲಿಸಬೇಕು ಎಂದು ದ.ಕ. ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.
Next Story





