ಭಟ್ಕಳ: ಅರಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿದ ಮೀನುಗಾರಿಕ ದೋಣಿಯ ರಕ್ಷಣೆ

ಭಟ್ಕಳ: ಅರಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ಅಪಾಯದಲ್ಲಿದ್ದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದನ್ನು ರಕ್ಷಿಸಿ ದಡಕ್ಕೆ ತಲುಪಿಸಿದ ಘಟನೆ ಗುರುವಾರ ಬಂದರ್ ನಲ್ಲಿ ನಡೆದಿದೆ.
ಮಂಗಳೂರಿನ ಗ್ರೀನ್ ಸಿಲ್ವರ್ ಎಂಬ ಹೆಸರಿನ ಬೋಟು ಮೀನುಗಾರಿಕೆ ತೆರಳಿದ್ದು ಸಮುದ್ರದಲ್ಲಿ ಎದ್ದಿರುವ ಚಂಡುಮಾರುತಕ್ಕೆ ಸಿಲುಕಿ ಅಪಾಯ ಎದುರಿಸುತ್ತಿತ್ತು ಎನ್ನಲಾಗಿದ್ದು ಅಪಾಯವನ್ನು ಅರಿತ ಮೀನುಗಾರರು ತಮ್ಮ ಬೋಟನ್ನು ಬಂದರ್ ಕಡೆಗೆ ಸಾಗಿಸುತ್ತಿದ್ದಾಗ ದೀಪಸ್ಥಂಭ ಗುಡ್ಡದ ಬಳಿ ಬೋಟು ಮುಳುಗಡೆಯಾಗುತ್ತಿರುವುದನ್ನು ಅರಿತ ಮೀನುಗಾರರು ನಿರಂತರ ಪ್ರಯತ್ನಪಟ್ಟು ಅದನ್ನು ನಿಯಂತ್ರಿಸಿದ್ದು ಕೊನೆಗೆ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅರಬಿ ಸಮುದ್ರದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಚಂಡಮಾರುತ ಉಂಟಾಗುವ ಸಾಧ್ಯತೆ ಇರುವುದರಿಂದಾಗಿ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಅದೇಶಿಸಿದೆ.
Next Story





