ಸೈಯದ್ ಅಬ್ದುಲ್ ರಹ್ಮಾನ್ ಗಿಲಾನಿ ನಿಧನ

ಹೊಸದಿಲ್ಲಿ, ಅ. 25: ಸಂಸತ್ ದಾಳಿ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದಿಂದ ಮರಣ ದಂಡನೆಗೆ ಗುರಿಯಾಗಿದ್ದ, ಅನಂತರ 2001ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಯಾಗಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಸೈಯದ್ ಅಬ್ದುಲ್ ರೆಹ್ಮಾನ್ ಗಿಲಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೈಯದ್ ಅಬ್ದುಲ್ ರೆಹ್ಮಾನ್ ಗಿಲಾನಿ ಅವರು ಹೃದಯಾಘಾತದಿಂದ ಗುರುವಾರ ಸಂಜೆ ನಿಧನರಾದರು ಎಂದು ಅವರ ಕುಟುಂಬ ಹೇಳಿದೆ.
ಸಂಸತ್ ದಾಳಿ ಪ್ರಕರಣದೊಂದಿಗೆ ಸಂಬಂಧ ಹೊಂದಿದ ಆರೋಪದಲ್ಲಿ ಗಿಲಾನಿ ಅವರನ್ನು ಬಂಧಿಸಲಾಗಿತ್ತು. ಆದರೆ, ಸಾಕ್ಷಾಧಾರದ ಕೊರತೆಯಿಂದ 2003 ಅಕ್ಟೋಬರ್‌ನಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು. ಈ ನಿರ್ಧಾರವನ್ನು 2005ರಲ್ಲಿ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು.
Next Story





