ಭಾರತೀಯ ಅರಣ್ಯ ಕಾಯ್ದೆಗೆ ತಿದ್ದುಪಡಿಯ ಕೇಂದ್ರದ ಪ್ರಸ್ತಾಪಕ್ಕೆ ಮಿಝೊರಂ ತಿರಸ್ಕಾರ

ಹೊಸದಿಲ್ಲಿ,ಅ.25: ಉದ್ದೇಶಿತ ತಿದ್ದುಪಡಿಗಳು ಸಂವಿಧಾನದ 371 ಜಿ ವಿಧಿಯಡಿ ರಾಜ್ಯವು ಹೊಂದಿರುವ ವಿಶೇಷ ಸೌಲಭ್ಯಗಳಿಗೆ ವಿರುದ್ಧವಾಗಿರುವುದರಿಂದ ಭಾರತೀಯ ಅರಣ್ಯ ಕಾಯ್ದೆ,1927ಕ್ಕೆ ತಿದ್ದುಪಡಿ ತರುವ ಕೇಂದ್ರದ ಪ್ರಸ್ತಾಪವನ್ನು ಮಿಝೊರಂ ತಿರಸ್ಕರಿಸಿದೆ ಎಂದು ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದರು.
ಉದ್ದೇಶಿತ ತಿದ್ದುಪಡಿಗಳನ್ನು ರಾಜ್ಯ ಸರಕಾರವು ತಿರಸ್ಕರಿಸಿದೆ ಎಂದು ಮಿಝೊರಂ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಕಾರ್ಯದರ್ಶಿ ಅಜಯ ಸಕ್ಸೇನಾ ಅವರು ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕರಡು ತಿದ್ದುಪಡಿಯಲ್ಲಿನ ಹಲವಾರು ನಿಬಂಧನೆಗಳನ್ನು ಕೈಬಿಡಬೇಕಾಗಿದೆ,ಹೀಗಾಗಿ ಅವುಗಳನ್ನು ರಾಜ್ಯದ ಅರಣ್ಯ ಸಚಿವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧುರೀಣರು,ರಾಜಕೀಯ ಪಕ್ಷಗಳು,ವಿದ್ಯಾರ್ಥಿ ಒಕ್ಕೂಟಗಳು ಮತ್ತು ಚರ್ಚ್‌ಗಳ ಸಭೆಯು ಒಪ್ಪಿಕೊಂಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Next Story





