ಸೋತಿರಬಹುದು, ಆದರೆ ಆಟ ಮುಗಿದಿಲ್ಲ: ಬಿಜೆಪಿ ಮುಖಂಡ ಭೋಸಲೆ

ಮುಂಬೈ, ಅ.25: ತಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಇನ್ನೂ ಆಟ ಮುಗಿದಿಲ್ಲ ಎಂದು ಮಹಾರಾಷ್ಟ್ರದ ಸತಾರಾ ಲೋಕಸಭಾ ಉಪಚುನಾವಣೆಯಲ್ಲಿ ಆಘಾತಕಾರಿ ಸೋಲುಂಡಿರುವ ಶಿವಾಜಿ ವಂಶಸ್ಥ ಬಿಜೆಪಿ ಮುಖಂಡ ಉದಯನ್‌ರಾಜೆ ಭೋಸಲೆ ಹೇಳಿದ್ದಾರೆ.
17ನೇ ಶತಮಾನದ ಮರಾಠಾ ದೊರೆ ಶಿವಾಜಿಯ ವಂಶಸ್ಥರಾಗಿರುವ ಭೋಸಲೆ ಪಶ್ಚಿಮ ಮಹಾರಾಷ್ಟ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿ ಮುಖಂಡ ಶ್ರೀನಿವಾಸ ಪಾಟೀಲ್ ಎದುರು ಸೋಲುಂಡಿದ್ದಾರೆ. ಇವತ್ತು ಸೋತಿರಬಹುದು. ಆದರೆ ನಿಷ್ಕ್ರಿಯವಾಗಿಲ್ಲ. ಗೆದ್ದಿಲ್ಲ, ಆದರೆ ಇನ್ನೂ ಕತೆ ಮುಗಿದಿಲ್ಲ ಎಂದು ಭೋಸಲೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ತನಗೆ ಮತ ಹಾಕಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎನ್‌ಸಿಪಿ ಪಕ್ಷದ ಅಭ್ಯರ್ಥಿಯಾಗಿ ಈ ಕ್ಷೇತ್ರದ ಹಾಲಿ ಸಂಸದರಾಗಿದ್ದ ಭೋಸಲೆ, ಈ ಬಾರಿಯ ಚುನಾವಣೆಗೂ ಮುನ್ನ ಬಿಜೆಪಿಗೆ ಪಕ್ಷಾಂತರ ಮಾಡಿ ಬಿಜೆಪಿ ಪರ ಸ್ಪರ್ಧಿಸಿದ್ದರು. ಆದರೆ ಎನ್‌ಸಿಪಿ ಅಭ್ಯರ್ಥಿಯೆದುರು 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದರು.
Next Story





