Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮನುಕುಲದ ಹಿತಕ್ಕಾಗಿ ಅಭಿವೃದ್ಧಿ,...

ಮನುಕುಲದ ಹಿತಕ್ಕಾಗಿ ಅಭಿವೃದ್ಧಿ, ಬದಲಾವಣೆಯ ಪ್ರತಿನಿಧಿಗಳಾಗಬೇಕು: ಡಾ ಅಶ್ವಥ್ ನಾರಾಯಣ

ದೇರಳಕಟ್ಟೆ ಯೆನೆಪೊಯ ವಿಶ್ವವಿದ್ಯಾಲಯದ9ನೇ ಘಟಿಕೋತ್ಸವ

ವಾರ್ತಾಭಾರತಿವಾರ್ತಾಭಾರತಿ25 Oct 2019 10:52 PM IST
share
ಮನುಕುಲದ ಹಿತಕ್ಕಾಗಿ ಅಭಿವೃದ್ಧಿ, ಬದಲಾವಣೆಯ ಪ್ರತಿನಿಧಿಗಳಾಗಬೇಕು: ಡಾ  ಅಶ್ವಥ್ ನಾರಾಯಣ

ಮಂಗಳೂರು, ಅ.25: ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ವೈದ್ಯರು ಮನುಕುಲದ ಅಭಿವೃದ್ಧಿ ಗಾಗಿ ಹಾಗೂ ಬದಲಾವಣೆಗಾಗಿ ಸಮಾಜದ ಪ್ರತಿನಿಧಿಗಳಾಗಬೇಕು ಎಂದು ಕರ್ನಾಟಕ ರಾಜ್ಯದ ಉಪ ಮುಖ್ಯ ಮಂತ್ರಿ ಹಾಗೂ ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಕರೆ ನೀಡಿದ್ದಾರೆ.

ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾಲಯದ ಯೆಂಡೂರೆನ್ಸ್ ಸಭಾಂಗಣದಲ್ಲಿಂದು 9ನೇ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಾ ತಿಳಿಸಿದ್ದಾರೆ.

ಸಮಾಜದಿಂದ ಪಡೆದ ಜ್ಞಾನವನ್ನು ಮತ್ತೆ ಸಮಾಜದ ಹಿತಕ್ಕಾಗಿ, ಬಲಿಷ್ಠ ಭಾರತದ ನಿರ್ಮಾಣ ಕ್ಕಾಗಿ ಬಳಸಬೇಕು ನವೀನ ತಂತ್ರಜ್ಞಾನ ದಿಂದ ಉತ್ತಮ ಸಮಾಜ ನಿರ್ಮಾಣ ಕ್ಕೆ ಕೊಡುಗೆ ನೀಡಬೇಕು ಎಂದು ಡಾ‌. ಅಶ್ವಥ್ ನಾರಾಯಣ ಕರೆ ನೀಡಿದರು.

ಯೆನೆಪೊಯ ವಿ.ವಿ.ಸಮಾಜದ ಎಲ್ಲಾ ಪದವೀಧರರಿಗೆ ಮುಂದಿನ ದಿನಗಳಲ್ಲಿ ಉತ್ತಮ‌ ಅವಕಾಶಗಳಿದ್ದು ಸಾಮಾಜಿಕ ವಾಗಿಯೂ ತಮ್ಮನ್ನು ಮನುಕುಲದ ಒಳಿತಿಗಾಗಿ ತೊಡಗಿಸಿಕೊಳ್ಳಬೇಕು‌. ಮುಖ್ಯವಾಗಿ ಭಾರತ ಸರ್ಕಾರದ ಯೋಜನೆಗಳಾಗಿರುವ ಕೌಶಲ ಭಾರತ, ಸ್ವಚ್ಛ ಭಾರತ, ಡಿಜಿಟಲ್ ಭಾರತ, ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ಟಾರ್ಟಪ್ ಇಂಡಿಯಾ ಮುಂತಾದ ಯೋಜನೆಗಳಲ್ಲೂ ಉತ್ತಮ ಅವಕಾಶ ಗಳಿದ್ದು ಇದರೊಂದಿಗೆ ಕೈಜೋಡಿಸುವ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಾರಕ ಕಾಯಿಲೆಗಳಾದ ಡಯಾಬಿಟೀಸ್, ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳನ್ನು ನಿಯಂತ್ರಿಸುವ ಸವಾಲನ್ನು ಯುವ ವೈದ್ಯರು ಸ್ವೀಕರಿಸಬೇಕೆಂದು ಕರೆ ನೀಡಿದರು.

ಸಮಾಜದ ಎಲ್ಲಾ ವರ್ಗದವರಿಗೂ ಉನ್ನತ ಶಿಕ್ಷಣ ನೀಡುವ ಮೂಲಕ ಯೆನೆಪೊಯ ಶಿಕ್ಷಣ ಸಂಸ್ಥೆ ಮತ್ತು ಅದರ ನೇತಾರರು ಮಾದರಿ ಎಂದು ಅವರು ತಮ್ಮ ಘಟಿಕೋತ್ಸವ  ಭಾಷಣದಲ್ಲಿ ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞ ವಹಿಸಿ ಪದವಿ ಪ್ರಧಾನ ಮಾಡಿದರು.

ಸಮಾರಂಭದಲ್ಲಿ ಜಾಮಿಯ ಹಮ್ದರ್ದ್ ದೆಹಲಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸೈಯದ್  ಪದ್ಮಶ್ರಿ ಇತೆಶ್ಯಾಮ್ ಹಸ್ನೇನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ (ಡಾಕ್ಟರ್ ಆಫ್ ಸೈನ್ಸ್) ನೀಡಿ ಗೌರವಿಸಲಾಯಿತು. ಅವರು ಸಮಾ ರಂಭವನ್ನು ದ್ದೇಶಿಸಿ ಮಾತನಾಡುತ್ತಾ, ಯೆನೆಪೊಯ ವಿಶ್ವವಿದ್ಯಾಲಯದ ಸಾಧನೆಯ ಬಗ್ಗೆ ಶ್ಲಾಘಿಸಿದರು. ಪ್ರಸಕ್ತ ಡಿಜಿಟಲ್ ತಂತ್ರಜ್ಞಾನದ ಪ್ರಪಂಚದಲ್ಲಿ ಭಾರತೀಯರು ತಮ್ಮದೇ ಆದ ಸಾಮರ್ಥ್ಯ ದಿಂದ ಜಾಗತಿಕವಾಗಿ ಸ್ಥಾನ ಪಡೆದಿದ್ದಾರೆ. ಆದರು ನಾವು ಬೆಳೆದ ಸಮಾಜ ದ ಬಗ್ಗೆ ಕಾಳಜಿ ಇರಲಿ ಎಂದು ಅವರು ಕಿವಿ ಮಾತು ಹೇಳಿದರು.

ಚೆನ್ನೈಯ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಇ.ಹೇಮಂತ ರಾಜ್ ಶುಭ ಹಾರೈಸಿದರು. ಸಮಾರಂಭದಲ್ಲಿ ಯೆನೆಪೊಯ ವಿ.ವಿ.ಸಹ‌ ಉಪಕುಲಪತಿ ಡಾ.ಸಿ.ವಿ.ರಘುವೀರ್, ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ.ಬಿ.ಟಿ.ನಂದೀಶ್, ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಮೊಹಮ್ಮದ್ ಕುಂಞಿ, ಟ್ರಸ್ಟಿ ವೈ.ಅಬ್ದುಲ್ಲಾ ಜಾವೇದ್, ವಿವಿಧ ವಿಭಾಗದ ಡೀನರುಗಳಾದ. ಡಾ.ಅಖ್ತರ್ ಹುಸೈನ್, ಡಾ.ಎಂ.ಎಸ್.ಮೂಸಬ್ಬ, ಡಾ.ಲೀನಾ ಕೆ.ಸಿ., ಡಾ.ಪದ್ಮಕುಮಾರ್ ಎಸ್., ಬಿಒಎಂ ಸದಸ್ಯರಾದ ಡಾ.ವೇದ್ ಪ್ರಕಾಶ್ ಮಿಶ್ರಾ, ಬಿ.ಎ.ವಿವೇಕ್ ರೈ, ಡಾ.ಪ್ರಕಾಶ್ ರೋಬರ್ಟ್ ಎಂ.ಸಲ್ದಾನ, ಡಾ.ಮೊಹಮ್ಮದ್ ಹಸನ್ ಸರ್ಫರಾಜ್ ಮೊದಲಾದವರು ಉಪಸ್ಥಿತರಿದ್ದರು. ಯೇನೆಪೊಯ ವಿವಿಯ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಸ್ವಾಗತಿಸಿದರು.

ಘಟಿಕೋತ್ಸವ ದಲ್ಲಿ ಪಿಎಚ್ ಡಿ-10,  ಎಂಡಿಎಸ್-47, ಬಿಡಿಎಸ್-85, ಮೆಜೆಸ್ಟ್ರೇಟ್ ಚಿರುಗ್ವೇ ಎಂ.ಸಿಎಚ್ ಯೂರೋಲಜಿ-1, ಪಿಜಿ ಡಿಪ್ಲೋಮ ಇನ್ ಬಯೋ ಎಥಿಕ್ಸ್ ಮತ್ತು ಮೆಡಿಕಲ್ ಎಥಿಕ್ಸ್-17, ಪಿಜಿ ಡಿಪ್ಲೊಮಾ ಇನ್ ಕ್ಲಿನಿಕಲ್ ಎಥಿಕ್ಸ್-1, ಪಿಜಿ ಡಿಪ್ಲೊಮಾ ಇನ್ ಫೋರನ್ಸಿಕ್ ಅಂಥ್ರೋಪೋಲಜಿ-9, ಪಿಜಿ ಡಿಪ್ಲೊಮಾ ಇನ್ ಮಲ್ಟಿಯೋಮಿಕ್ಸ್ ಟೆಕ್ನಾಲಜಿ -8, ಪಿಜಿ ಡಿಪ್ಲೊಮಾ ಇನ್ ಅಪ್ಲ್ಯಾಯ್ಡ್‌‌ ಇಸ್ಲಾಮಿಕ್-10, ಎಂಪಿಎಚ್-1, ಎಂಎಚ್ ಎ_6, ಎಂಬಿಬಿಎಸ್-159, ಬಿಎಸ್ಸಿ ಟೆಕ್ನಾಲಜಿ ಪ್ರೋಗ್ರಾಂ-58, ಬಿಎಚ್ ಎ-5, ಎಂಸಿಎಚ್ ನರ್ಸಿಂಗ್-98, ಎಂಪಿಟಿ-10, ಎಂಎಸ್ ಡಬ್ಯ್ಲು-8, ಬಿಪಿಟಿ-50 ಮಂದಿ  ಸೇರಿದಂತೆ ಒಟ್ಟು 697 ಮಂದಿಗೆ ಪದವಿಧರರಿಗೆ ಪದವಿ ಪ್ರಧಾನ ಮಾಡಲಾಯಿತು.

ಡಾ. ಮಲ್ಲಿಕಾ ಶೆಟ್ಟಿ, ರೋಶೆಲ್ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X