ಮೈಸೂರು: ಆರ್.ಸಿ.ಇ.ಪಿ ಒಪ್ಪಂದ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಮೈಸೂರು,ಅ.25: ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ ಒಪ್ಪಂದ ವಿರೋಧಿಸಿ ರಾಷ್ಟ್ರೀಯ ಕಿಸಾನ್ ಮಹಾಸಂಘ, ರಾಜ್ಯ ಕಬ್ಬುಬೆಳೆಗಾರರ ಸಂಘದ ವತಿಯಿಂದ ಎಪಿಎಂಸಿ (ಬಂಡಿಪಾಳ್ಯ) ಬಳಿ ಮೈಸೂರು-ನಂಜನಗೂಡು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಆರ್.ಸಿ.ಇ.ಪಿ ಒಪ್ಪಂದಿಂದ ನಮ್ಮ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ. ಒಪ್ಪಂಕ್ಕೆ ಸಹಿ ಮಾಡುತ್ತಿರುವ 16 ದೇಶಗಳು ಕೃಷಿಗೆ ಹೆಚ್ಚು ಸಬ್ಸಿಡಿ ನೀಡುತ್ತಿದ್ದು, ಇದರಿಂದ ಬೆಳೆದ ಉತ್ಪನ್ನಗಳನ್ನು ಭಾರತ ದೇಶಕ್ಕೆ ತೆರಿಗೆ ಇಲ್ಲದೆ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ. ಇದರಿಂದ ನಮ್ಮ ದೇಶದ ಉತ್ಪನ್ನಗಳನ್ನು ಭಾರತ ದೇಶಕ್ಕೆ ತೆರಿಗೆ ಇಲ್ಲದೆ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ. ಇದರಿಂದ ನಮ್ಮ ದೇಶದ ಉತ್ಪನ್ನಗಳಾದ ಹಾಲು, ಸಾಂಬಾರ, ತೋಟಗಾರಿಕೆ, ಹೈನುಗಾರಿಕೆಗೆ ಬಾರಿ ಹೊಡೆತ ಬೀಳಲಿದ್ದು, ಆರ್ಥಿಕ ನಷ್ಟ ಉಂಟಾಗಲಿದೆ. ಒಪ್ಪಂದ ಜಾರಿಯಾದರೆ ದೇಶೀಯ ಹಾಲಿನದರ ಲೀಟರ್ ಗೆ 15 ರೂ. ಕಡಿಮೆಯಾಗಲಿದೆ ಎಂದು ಆರೋಪಿಸಿದರು.
ಬೀಜದ ಕಂಪನಿಗಳು ತಮ್ಮ ಬೌದ್ಧಿಕ ಅಸ್ತಿತ್ವದ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳುವ ಸಂದರ್ಭ ಬಂದಲ್ಲಿ ರೈತರು ಅಪರಾಧಿಗಳಾಗಿ ಜೈಲು ಸೇರುತ್ತಾರೆ. ವಿದೇಶಿ ಕಂಪನಿಗಳು ಕೃಷಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಸರಕು ಸೇವೆಗಳು ಸರ್ಕಾರ, ಸಾರ್ವಜನಿಕ ಸಂಗ್ರಹಣೆಯಲ್ಲಿ ವಿದೇಶಿ ನಿಗಮಗಳು ಭಾಗವಹಿಸುವುದರಿಂದ ಮತ್ತಷ್ಟು ಕಾರ್ಮಿಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಸೂಪರ್ ಮಾರ್ಕೆಟ್, ದೊಡ್ಡಕಂಪನಿಗಳು ನೇರ ಚಿಲ್ಲರೆ ವ್ಯಾಪಾರದಿಂದ ಸ್ಥಳಿಯ ಮಾರುಕಟ್ಟೆಗಳು ಮಾಡುವ ಶಕ್ತಿಯನ್ನು ಪಡೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅತ್ತಳ್ಳಿ ದೇವರಾಜು, ಜಗದೀಶ್, ಗುರುಮೂರ್ತಿ, ಶಂಭುಲಿಂಗಸ್ವಾಮಿ, ಮಹದೇವ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.







