ಸಿಲಿಂಡರ್ ರೀಫಿಲ್ಲಿಂಗ್: 7 ಆರೋಪಿಗಳ ಬಂಧನ, 952 ಸಿಲಿಂಡರ್‌ಗಳು, ಟೆಂಪೋ ಜಪ್ತಿ

ಬೆಂಗಳೂರು, ಅ.25: ಇಲ್ಲಿನ ಶಿವಾಜಿ ನಗರ ಸೇರಿದಂತೆ ಹಲವು ಅಡುಗೆ ಅನಿಲ ಸಿಲಿಂಡರ್‌ಗಳನ್ನು ರೀಫಿಲ್ಲಿಂಗ್ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಪೊಲೀಸರು, 952 ಸಿಲಿಂಡರ್‌ಗಳು ಹಾಗೂ ಟೆಂಪೋವನ್ನು ಜಪ್ತಿ ಮಾಡಿದ್ದಾರೆ.
ಬಂಧಿತರಿಂದ 952 ಸಿಲಿಂಡರ್‌ಗಳು, ಟೆಂಪೋ, 20 ರೀಫಿಲ್ಲಿಂಗ್ ಯಂತ್ರಗಳು, 12 ತೂಕ ಮಾಡುವ ಯಂತ್ರಗಳು ಸೇರಿದಂತೆ, ಲಕ್ಷಾಂತರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ತಿಳಿಸಿದೆ.
Next Story