ಎಸ್.ವೈ.ಎಸ್. ಕೊಡಂಗಾಯಿ ಶಾಖೆಗೆ ಪದಾಧಿಕಾರಿಗಳ ಆಯ್ಕೆ

ವಿಟ್ಲ, ಅ.26: ಎಸ್.ವೈ.ಎಸ್. ಕೊಡಂಗಾಯಿ ಬ್ರಾಂಚ್ ನ ವಾರ್ಷಿಕ ಮಹಾಸಭೆಯು ಕೊಡಂಗಾಯಿ ಸುನ್ನೀ ಸೆಂಟರಿನಲ್ಲಿ ಗುರುವಾರ ರಾತ್ರಿ ನಡೆಯಿತು.
ಸುನ್ನೀ ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಹಮೀದ್ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಾಂಚ್ ಅಧ್ಯಕ್ಷ ಪಿ.ಹುಸೈನ್ ಪಳ್ಳಿಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್. ಬಂಟ್ವಾಳ ಝೋನ್ ಕಾರ್ಯದರ್ಶಿ ಕೆ.ಎಂ.ಅಬ್ದುಲ್ ಹಮೀದ್ ಸಖಾಫಿ ‘ಸುನ್ನೀ ಸಂಘ ಕುಟುಂಬ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್ ಸಅದಿ ವರದಿ ವಾಚಿಸಿದರು, ಕಾರ್ಯದರ್ಶಿ ಸಿಎಚ್ ಅಬ್ದುಲ್ ಖಾದರ್ ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್.ವೈ.ಎಸ್. ವಿಟ್ಲ ಸೆಂಟರ್ ಕೋಶಾಧಿಕಾರಿ ಉಸ್ಮಾನ್ ಹಾಜಿ ಸೆರ್ಕಳ ನೇತೃತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಕೆ.ಎ.ಮುಹಮ್ಮದ್ ಅಶ್ರಫ್ ಸಅದಿ ಕರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಎಂಕೆಎಂ ಕಾಮಿಲ್ ಸಖಾಫಿ, ಕೊಡಂಗಾಯಿ ಕೋಶಾಧಿಕಾರಿಯಾಗಿ ಸಿಎಚ್ ಅಬ್ದುಲ್ ಖಾದರ್ ಚೆನಿಲ ಆಯ್ಕೆಯಾದರು.
ಟೀಮ್ ಇಸಾಬ ಅಮೀರ್ ಆಗಿ ಸುಲೈಮಾನ್ ದರ್ಖಾಸ್, ಉಪಾಧ್ಯಕ್ಷ, ಆಫೀಸ್ ಮತ್ತು ನಿರ್ವಹಕರಾಗಿ ಬಿ.ಎಂ.ಇಬ್ರಾಹೀಂ ಜಾರ, ಸಾಂತ್ವನ ಹಾಗು ಇಸಾಬ ವಿಭಾಗದ ಕಾರ್ಯದರ್ಶಿಯಾಗಿ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ, ಶಿಕ್ಷಣ ಹಾಗೂ ದಅವಾ ವಿಭಾಗದ ಕಾರ್ಯದರ್ಶಿಯಾಗಿ ಅಬ್ಬಾಸ್ ಮದನಿ ಮೀಡಿಯಾ ಕಾರ್ಯದರ್ಶಿಯಾಗಿ ಇಬ್ರಾಹೀಂ ಸಅದಿ ಅಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಹಾಗೂ ಸೆಂಟರ್ ಕೌನ್ಸಿಲರುಗಳಾಗಿ 7 ಮಂದಿಯನ್ವು ಆರಿಸಲಾಯಿತು.
ಹಾಲಿ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ವಂದಿಸಿದರು.