ಸಜಿಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ

ಬಂಟ್ವಾಳ, ಅ. 26: ನಬಾರ್ಡ್ ಯೋಜನೆಯಡಿ 94 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ನಿರ್ಮಾಣವಾಗಲಿರುವ ಸಜಿಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಊರಿನ ಜನರ ಸಹಕಾರದ ಜೊತೆ ಕಾಲೇಜಿನ ಬೇಡಿಕೆಗೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ನಡೆಸಲಾಗುವುದು. ಸರಕಾರದ ಅನುದಾನದ ಜೊತೆಯಲ್ಲಿ ದಾನಿಗಳ ಸಹಕಾರ ಇದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಶ್ರೀಕಾಂತ ಶೆಟ್ಟಿ, ಪಾ.ಮ.ರೈ.ಸೇ.ಸಂಘದ ಅಧ್ಯಕ್ಷ ಜಯಶಂಕರ ಬಾಶ್ರಿತ್ತಾಯ, ಗುತ್ತಿಗೆದಾರ ಎಂ.ಆರ್. ಕನ್ಟ್ರಕ್ಷನ್ ಮಾಲಕ ಎಂ.ಆರ್ ಆಶ್ರಫ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಷಣ್ಮುಗಂ, ಪ್ರಾಶುಂಪಾಲ ಕೆ. ವಸಂತ ಶೆಟ್ಟಿ, ಉಪಪ್ರಾಶುಂಪಾಲ ಜಯರಾಮ್ ಶೆಟ್ಟಿ, ಉಪನ್ಯಾಸಕರಾದ ಬಾಬು ಗಾಂವಕ್ಕರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹಾಬಲ ರೈ, ಎಂ. ಸುಬ್ರಹ್ಮಣ್ಯ ಭಟ್, ಕೆ.ಸುರೇಶ್ ಶೆಟ್ಟಿ, ವಿಶ್ವನಾಥ ಕೊಟ್ಟಾರಿ, ಗ್ರಾಪಂ ಅಧ್ಯಕ್ಷ ಕೆ.ವಿಧ್ವನಾಥ ಬೆಳ್ಚಡ, ತಾಪಂ ಮಾಜಿ ಅಧ್ಯಕ್ಷ ಯಶವಂತ, ವಸಂತ ಶೆಟ್ಟಿ, ವೀರೆಂದ್ರ ಕುಲಾಲ್ ಉಪಸ್ಥಿತರಿದ್ದರು. ಸಬ್ರಹ್ಮಣ್ಯ ಭಟ್ ಭೂಮಿಪೂಜೆ, ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು.





