ನ.1ರಂದು ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ
ಉಡುಪಿ, ಅ.26: ಬ್ರಹ್ಮಗಿರಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿ ಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಗಿರಿಯ ಬಾಲಭವನದಲ್ಲಿ ನ.1ರಂದು ಬೆಳಗ್ಗೆ 10ಗಂಟೆಗೆ ಏರ್ಪಡಿಸಲಾಗಿದೆ.
ಇದರಲ್ಲಿ 11ರಿಂದ 13ವರ್ಷ ವಯಸ್ಸಿನವರು ಮಾತ್ರ ಭಾಗವಹಿಸಬಹು ದಾಗಿದೆ. ವಿಶ್ವ ಶಾಂತಿಯ ಪ್ರಯಾಣ ಶೀರ್ಷಿಕೆಯಡಿಯಲ್ಲಿ ಚಿತ್ರ ರಚಿಸಬೇಕು. ಚಿತ್ರಕಲೆಗೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು ಸ್ಫರ್ಧಾಳುಗಳೇ ತರಬೇಕು. ಪೇಪರ್ ಶೀಟ್‌ನ್ನು ಆಯೋಜಕರು ಒದಗಿಸಲಿದ್ದಾರೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ್ನು ಅದೇ ದಿನ ವಿತರಿಸಲಾಗುವುದು.
ಪ್ರಥಮ ಸ್ಥಾನ ಪಡೆದ ಚಿತ್ರವನ್ನು ಲಯನ್ಸ್ ಜಿಲ್ಲಾ ಗವರ್ನರ್ ಮೂಲಕ ಲಯನ್ಸ್ ಇಂಟರ್‌ನ್ಯಾಶನಲ್ ಸಂಸ್ಥೆಗೆ ಕಳುಹಿಸಲಾಗುವುದು. ಅಮೆರಿಕಾದಲ್ಲಿ ಈ ಚಿತ್ರಕ್ಕೆ ಪ್ರಥಮ ಬಹುಮಾನ ಬಂದರೆ 5000 ಡಾಲರ್ ಪುರಸ್ಕಾರ ಮತ್ತು ಮಗುವಿಗೆ ತಂದೆ ತಾಯಿಯೊಂದಿಗೆ ಅಮೆರಿಕಾಕ್ಕೆ ಹೋಗಿ ಬರುವ ಅವಕಾಶ ಸಿಗಲಿದೆ ಎಂದು ಲಯನ್ಸ್ ಕ್ಲಬ್ ಬ್ರಹ್ಮಗಿರಿ ಕಾರ್ಯದರ್ಶಿ ಉಮೇಶ್ ನಾಯಕ್ ಹಾಗೂ ಲಿಯೋ ಕ್ಲಬ್ ಜಿಲ್ಲಾಧ್ಯಕ್ಷ ಫೌಜಾನ್ ಅಕ್ರಮ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.