ಅ. 27: ಮಕ್ಕಳ ಕಳ್ಳ ಸಾಗಣೆ ತಡೆಗೆ ಜನಜಾಗೃತಿ ರ್ಯಾಲಿ
ಮಂಗಳೂರು, ಅ.26: ದ.ಕ.ಜಿಲ್ಲಾ ಚೈಲ್ಡ್‌ಲೈನ್-1098 ಮತ್ತು ದ.ಕ. ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಗಳೂರು ಸೈಂಕ್ಲಿಂಗ್ ಕ್ಲಬ್, ಅಲೋಶಿಯನ್ ಬಾಯ್ಸಿಹೋಮ್ ಮಂಗಳೂರು, ಜೀವನ್ದಾರ ಕುಲಶೇಖರ, ಸಹೋದಯ ಬೆಥನಿ, ಪರಿಸರ ಆಸಕ್ತರ ಒಕ್ಕೂಟ, ಓಯಸಿಸ್ ಸಂಸ್ಥೆ ಬೆಂಗಳೂರು, ಕೆಜಿಎಸ್ ದ.ಕ. ಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಸಾಗಾಟ ಮತ್ತು ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ರ್ಯಾಲಿಯು ಅ.27ರಂದು ಬೆಳಗ್ಗೆ 7:45ಕ್ಕೆ ನಗರದಲ್ಲಿ ನಡೆಯಲಿದೆ.
ಲಾಲ್‌ಬಾಗ್‌ನಿಂದ ಆರಂಭಗೊಳ್ಳುವ ರ್ಯಾಲಿಯು ನಗರದಾದ್ಯಂತ ಸಂಚರಿಸಲಿದೆ. ಈಸಂದರ್ಭ ಬೀದಿ ನಾಟಕ ಕೂಡಾ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





