ಟ್ರಕ್ ಕಂಟೇನರ್‌ನಲ್ಲಿ ಪತ್ತೆಯಾದ ಶವಗಳು ವಿಯೆಟ್ನಾಮ್ ಪ್ರಜೆಗಳದ್ದು

ವಿಯೆಟ್ನಾಂ, ಅ.26: ಲಂಡನ್ ಸಮೀಪ ಟ್ರಕ್ಕೊಂದರ ಹಿಂಭಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರಲ್ಲಿ ಹೆಚ್ಚಿನವರು ವಿಯೆಟ್ನಾಮ್ ಪ್ರಜೆಗಳೆಂದು, ಆ ದೇಶದ ಕ್ಯಾಥೊಲಿಕ್ ಪಾದ್ರಿಯೊಬ್ಬರು ತಿಳಿಸಿದ್ದಾರೆ.
ಬ್ರಿಟನ್ ಪೊಲೀಸರು ಮೃತರು ಚೀನಿ ಪ್ರಜೆಗಳೆಂದು ಶುಕ್ರವಾರ ಹೇಳಿಕೆ ನೀಡಿದ್ದರು. ಆದರೆ ಚೀನಾ ಅದನ್ನು ಅಲ್ಲಗಳೆದಿತ್ತು ಹಾಗೂ ಮೃತರು ಯಾವ ದೇಶದವರೆಂಬುದು ಇನ್ನೂ ದೃಢಪಟ್ಟಿಲ್ಲವೆಂದು ತಿಳಿಸಿತ್ತು. ಇದೀಗ ಮೃತದೇಹಗಳ ಗುರುತುಪತ್ತೆಗಾಗಿ ಚೀನಿ ಹಾಗೂ ವಿಯೆಟ್ನಾಮ್ ಅಧಿಕಾರಿಗಳು ಪೊಲೀಸರು ಜೊತೆ ನಿಕಟ ಸಂಪರ್ಕದಲ್ಲಿದ್ದಾರೆಂದು ಮೂಲಗಳು ಹೇಳಿವೆ.
ಮೃತರಲ್ಲಿ ಹೆಚ್ಚಿನವರು ವಿಯೆಟ್ನಾಮ್‌ನ ಕಡುಬಡತನದ ಪ್ರಾಂತಗಳಲ್ಲೊಂದಾದ ನ್ಯಾಗೆ ಆ್ಯನ್‌ಗೆ ಸೇರಿದವರಾಗಿದ್ದಾರೆಂದು ಫಾದರ್ ಆ್ಯಂಥನಿ ಡ್ಯಾಂಗ್ ಹ್ಯೂ ನಾಮ್ ತಿಳಿಸಿದ್ದಾರೆ. ಅಕ್ರಮವಾಗಿ ಮಾನವರನ್ನು ಸಾಗಿಸುವ ಜಾಲದ ಮೂಲಕ ಅವರು ಬ್ರಿಟನ್‌ಗೆ ಬಂದಿರುವ ಸಾಧ್ಯತೆಯಿದೆಯೆಂದು ಪೊಲೀಸರು ತಿಳಿಸಿದ್ದಾರೆ.
Next Story







