ಡಾ.ಎಚ್.ಎಸ್.ಶ್ವೇತಾಗೆ ಅತ್ಯುತ್ತಮ ಭಿತ್ತಿಪತ್ರ ಪ್ರಶಸ್ತಿ

ಬೆಂಗಳೂರು, ಅ. 26: ನೀರಿನಲ್ಲಿ ಸುಲಭವಾಗಿ ಕರಗಿ ಜೈವಿಕ ಲಭ್ಯತೆಯನ್ನು ಹೆಚ್ಚು ಮಾಡುವ ನ್ಯಾನೋಕರ್ಕುಮಿನ್ ತಯಾರಿಕೆಯ ಹೊಸವಿಧಾನ ಅಧ್ಯಯನಕ್ಕೆ ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ಸಂಶೋಧಕಿ ಡಾ.ಎಚ್.ಎಸ್.ಶ್ವೇತಾ ಅವರಿಗೆ ಅತ್ಯುತ್ತಮ ಭಿತ್ತಿಪತ್ರ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ತೆಲಂಗಾಣದ ತಿರುಪತಿಯಲ್ಲಿ ನಡೆದ ಅನಿಮಲ್ ಫಿಶಿಯಾಲಜಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಎಚ್.ಎಸ್.ಶ್ವೇತಾ ಅವರು ಮಂಡಿಸಿದ ಸಂಶೋಧನೆಗೆ ವಿಶೇಷ ಪ್ರಶಸ್ತಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಂ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶ್ವೇತಾ ಅವರು ಡಾಕ್ಟರೇಟ್ ಪಡೆದಿದ್ದಾರೆ. ಬೆಂಗಳೂರಿನ ಆಡುಗೋಡಿಯ ರಾಷ್ಟ್ರೀಯ ಪಶು ಆಹಾರ ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ಸೌಲಭ್ಯಗಳನ್ನು ಈ ಆಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





