Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕುಲಪುರಾಣವನ್ನು ಕಾವ್ಯವನ್ನಾಗಿಸಿದ ಏಕೈಕ...

ಕುಲಪುರಾಣವನ್ನು ಕಾವ್ಯವನ್ನಾಗಿಸಿದ ಏಕೈಕ ಕವಿ ಬಿ.ಕೆ.ಸಿದ್ದಯ್ಯ: ಡಾ.ಎಲ್.ಹನುಮಂತಯ್ಯ

ವಾರ್ತಾಭಾರತಿವಾರ್ತಾಭಾರತಿ26 Oct 2019 11:16 PM IST
share
ಕುಲಪುರಾಣವನ್ನು ಕಾವ್ಯವನ್ನಾಗಿಸಿದ ಏಕೈಕ ಕವಿ ಬಿ.ಕೆ.ಸಿದ್ದಯ್ಯ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಅ.26: ಕುಲಪುರಾಣವನ್ನು ಕಾವ್ಯವನ್ನಾಗಿಸಿದ ಏಕೈಕ ಕವಿ ಹಿರಿಯ ಸಾಹಿತಿ ಬಿ.ಕೆ.ಸಿದ್ದಯ್ಯನವರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಆದಿ ಜಾಂಬವ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಹೋರಾಟಗಾರರ ಬಳಗದ ವತಿಯಿಂದ ಆಯೋಜಿಸಿದ್ದ ಬಕಾಲ ಕವಿ ಕೆ.ಬಿ.ಸಿದ್ದಯ್ಯ, ಚಿಕ್ಕನರಸಪ್ಪ ಹಾಗೂ ಧರ್ಮಣ್ಣಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾವ್ಯವನ್ನು ಬರೆಯುವಾಗ ನಮಗೆ ನಮ್ಮದೇ ಆದ ಆದ್ಯತೆ, ವಿಚಾರಗಳಿರುತ್ತವೆ. ಆದರೆ, ಬಕಾಲ ಕವಿ ಎಂದೇ ಪ್ರಸಿದ್ಧರಾದ ಸಿದ್ದಯ್ಯ ಕನ್ನಡ ಸಾಹಿತ್ಯದಲ್ಲಿ ಎಲ್ಲರನ್ನು ಗಮನ ಸೆಳೆದ, ದಲಿತತ್ವ, ಜಾತೀಯತೆ ಮೀರಿ ಕುಲ ಸಂಸ್ಕೃತಿಯನ್ನು ದ್ರವರೂಪವಾಗಿ ಕಾವ್ಯಕ್ಕಿಳಿಸಿದ ಏಕೈಕ ಕವಿಯಾಗಿದ್ದಾರೆ ಎಂದು ಹೇಳಿದರು.

ಬಕಾಲ ಕವಿ ಸಿದ್ದಯ್ಯರ ಕಾವ್ಯವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅವರ ಕಾವ್ಯವು ಓದಲು ಸಾಕಷ್ಟು ಕ್ಲಿಷ್ಟಕರವಾಗಿದ್ದರೂ, ಅದರಲ್ಲಿ ಒಳಾರ್ಥ ಅಪಾರವಾಗಿ ಅಡಗಿದೆ. ಕವಿಗೆ ತಾನು ಬರೆದ ಕಾವ್ಯವನ್ನು ಸಹ ಕವಿಗಳೊಂದಿಗೆ ಹಂಚಿಕೊಳ್ಳುವ, ಅವರ ಅಭಿಪ್ರಾಯ ಪಡೆಯುವುದು ಅಗತ್ಯ. ಸಿದ್ದಯ್ಯರಲ್ಲಿ ಅಂತಹ ಮನಸ್ಥಿತಿ ಇತ್ತು ಎಂದು ನುಡಿದರು.

ಸಿದ್ದಯ್ಯ ಕನ್ನಡದಲ್ಲಿ ಬುದ್ಧನ ಸಾಹಿತ್ಯವನ್ನು ಹಾಗೂ ಅಲ್ಲಮಪ್ರಭುವಿನ ವಚನ ಸಾಹಿತ್ಯವನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದರು. ಅಲ್ಲಮನ ಬಗ್ಗೆ ಇಡೀ ರಾತ್ರಿ ಬೇಕಾದರೂ ಪಾಠ ಮಾಡುವಷ್ಟು ಪರಿಪೂರ್ಣರಾಗಿದ್ದರು. ಬುದ್ಧನಂತೆ ಧ್ಯಾನವನ್ನು ಇಷ್ಟಪಡುತ್ತಿದ್ದ ಅವರು, ಯಾವುದೇ ಖಾಯಿಲೆಗಳು ಬಂದು ಆಸ್ಪತ್ರೆಯ ಮೆಟ್ಟಿಲು ಹತ್ತಿದರವರಲ್ಲ. ಅವರ ಇಂತಹ ಅತಿಯಾದ ಆತ್ಮವಿಶ್ವಾಸವೇ ಅವರ ಮರಣಕ್ಕೂ ಪ್ರಮುಖ ಕಾರಣವಾಗಿದೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಾನವೀಯ ಮಿಡಿತಗಳಿಗೆ ಹಂಬಲಿಸುತ್ತಿದ್ದ ಅತಿ ಅಪರೂಪದ ವ್ಯಕ್ತಿಯಾಗಿದ್ದರು ಸಿದ್ದಯ್ಯ. ಅತ್ಯುತ್ತಮ ಸಾಹಿತಿ, ಹೃದಯವಂತರಾಗಿ ಎಲ್ಲರ ಮನ ಗೆದ್ದಿದ್ದರು ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅಧ್ಯಯನ ಪೀಠ ರಚಿಸಿದ್ದೆವು. ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯಾ ಎಂದು ತನಿಖೆ ಮಾಡಲು ಎರಡು ಸಮಿತಿಗಳನ್ನು ರಚಿಸಿದ್ದೆವು. ಅದರಲ್ಲಿ ಒಂದಕ್ಕೆ ಸಿದ್ದಯ್ಯರನ್ನು ನೇಮಿಸಲಾಗಿತ್ತು. ಅವರು ಅದರಲ್ಲಿ ಅತ್ಯುತ್ತಮವಾಗಿ ಎಲ್ಲೆಡೆ ಸಂಚರಿಸಿ ಸಂಪೂರ್ಣ ವರದಿಯನ್ನು ನೀಡುತ್ತಿದ್ದರು ಎಂದು ಸ್ಮರಿಸಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಸಿದ್ದಯ್ಯ ಅಪರೂಪದ ದಲಿತ ಕವಿಯಾಗಿದ್ದರು. ಆದರೆ, ಕನ್ನಡದಲ್ಲಿ ಕವಿಗಳಿಗೆ ಸರಿಯಾದ ಮಾನ್ಯತೆ ಸಿಗುವುದಿಲ್ಲ. ಇದೇ ಕಾವ್ಯವನ್ನು ಹಿಂದಿಯಲ್ಲಿ ರಚನೆ ಮಾಡಿದ್ದರೆ, ಈ ವೇಳೆಗೆ ಅವರು ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದ ಕವಿಯಾಗಿಬಿಡುತ್ತಿದ್ದರು ಎಂದು ತಿಳಿಸಿದರು.

ದಲಿತರಿಗೂ ಬ್ರಾಹ್ಮಣರಿಗೂ ಅಂತರ್‌ಜಾತಿ ಮದುವೆ ಮಾಡಿಸುವಷ್ಟು ಸುಲಭವಾಗಿ, ದಲಿತರೊಳಗಿರುವ ಜಾತಿಗಳ ನಡುವೆ ಅಂತರ್‌ಜಾತಿ ಮದುವೆ ಮಾಡಿಸುವುದು ಸವಾಲಿನ ಕೆಲಸ. ಅಂತಹುದರಲ್ಲಿ ಬಕಾಲ ಕವಿ ಸಿದ್ದಯ್ಯರ ಮದುವೆಯು ಅಂದಿನ ಸಂದರ್ಭದಲ್ಲಿ ಮಾದರಿ ಮದುವೆಯಾಗಿತ್ತು ಎಂದು ಅವರು ನುಡಿದರು.

ಇಂಗ್ಲಿಷ್ ಪ್ರಾದ್ಯಾಪಕರಾಗಿದ್ದ ಸಿದ್ದಯ್ಯ ತನ್ನ ಕುಟುಂಬದ ಕಡೆಗೆ ಗಮನ ನೀಡದೆ ಮರೆಯಾಗಿಬಿಟ್ಟರು. ತನ್ನ ಆರೋಗ್ಯದ ವಿಷಯವನ್ನು ಅತ್ಯಂತ ಲಘುವಾಗಿ ಪರಿಗಣಿಸಿದರು. ತಾನೇ ಆರೋಗ್ಯವನ್ನು ಸುಧಾರಿಸಿಕೊಳ್ಳುವಷ್ಟು ಆತ್ಮಸ್ಥೈರ್ಯವನ್ನು ಹೊಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅದೇ ಅವರಿಗೆ ಶಾಪವಾಯಿತಾ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಹಾಗೂ ಲೇಖಕ ಡಾ.ರಾಜಪ್ಪ ದಳವಾಯಿ, ಸಿ.ಚಂದ್ರಶೇಖರ್, ರುದ್ರಪ್ಪ ಹನಗವಾಡಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಚಂದ್ರಶೇಖರ್, ಲೋಕೇಶ್ ಸೇರಿದಂತೆ ಹಲವರಿದ್ದರು.

ಆರೋಗ್ಯಕರ, ಸಮ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಸಿದ್ದಯ್ಯರ ಕನಸಾಗಿತ್ತು. ಅವರು ತಮ್ಮ ವಿರೋಧಾತ್ಮಕ ಅಂಶಗಳನ್ನೂ ಅತ್ಯಂತ ಪ್ರೀತಿಯಿಂದಲೇ ಹೇಳುತ್ತಿದ್ದರು. ಒಂದು ಆಲೋಚನಾ ಕ್ರಮವನ್ನು ಅರ್ಥಮಾಡಿಕೊಳ್ಳದೇ, ಸಿದ್ದಯ್ಯರನ್ನು ಅರ್ಥ ಮಾಡಿಕೊಳ್ಳಲಾಗದು. ಸಿದ್ದಯ್ಯರ ಕಾವ್ಯವನ್ನು ಇಂದಿನವರು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಾಗ ಸಮಾಜದೊಂದಿನ ಸಂಬಂಧ ತಿಳಿಯುತ್ತದೆ.

- ಡಾ.ರಾಜಪ್ಪ ದಳವಾಯಿ, ಪ್ರಾಧ್ಯಾಪಕರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X