ಫ್ರೆಂಚ್ ಓಪನ್ ಫೈನಲ್‌ಗೆ ಭಾರತೀಯ ಜೋಡಿ

ಪ್ಯಾರಿಸ್: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಭಾರತದ ದಿರಾಗ್ ಶೆಟ್ಟಿ- ಸಾತ್ವಿಕ್ ರಾಜ್ ರಂಕಿರೆಡ್ಡಿ ಜೋಡಿ ಅಚ್ಚರಿಯ ಜಯ ಸಾಧಿಸಿ ಫೈನಲ್‌ಗೆ ಮುನ್ನಡೆದಿದೆ.
ಭಾರತೀಯ ಜೋಡಿ ಜಪಾನ್‌ನ ಹಿರೊಯುಕಿ ಎಂಡೊ ಮತ್ತು ಯುತಾ ವಟಾನಬ್ ಜೋಡಿಯನ್ನು 21-11, 25-23 ಅಂತರದಲ್ಲಿ ಸೆಮಿಫೈನಲ್‌ನಲ್ಲಿ ಮಣಿಸಿ ಫೈನಲ್‌ಗೆ ರಹದಾರಿ ಪಡೆಯಿತು.
ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಭಾರತೀಯ ಜೋಡಿ ಗೆಲುವಿನ ಓಟ ಮುಂದುವರಿಸಿ 49 ನಿಮಿಷಗಳಲ್ಲಿ ಪಂದ್ಯ ಗೆದ್ದಿತು. ಶುಕ್ರವಾರ ಭಾರತದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಇಬ್ಬರೂ ಕ್ವಾರ್ಟರ್ ಫೈನಲ್ ಹಂತದಲ್ಲಿ ನಿರ್ಗಮಿಸಿದ್ದರು. ಭಾರತದ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಥೈವಾನ್‌ನ ಚೊವ್ ತೀನ್ ಚೆನ್‌ಗೆ ಸೋತು ಹೊರ ನಡೆದಿದ್ದರು. ಭಾರತದ ಮತ್ತೊಬ್ಬ ಆಟಗಾರ ಪರುಪಳ್ಳಿ ಕಶ್ಯಪ್ ಅವರು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಅಂಗಸ್ ವಿರುದ್ಧ 11-21, 9-21 ಅಂತರದಿಂದ ಸೋತಿದ್ದರು.
Next Story





