ಪಂಜಾಬ್ ನ ಬಿಜೆಪಿ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ನಿಧನ

ಫಿರೋಜ್ಪುರ, ಅ.27: ಪಂಜಾಬ್ ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಅಧ್ಯಕ್ಷ ಕಮಲ್ ಶರ್ಮಾ (48) ರವಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು
ಕಮಲ್ ಶರ್ಮಾ ಅವರು ಬೆಳಗ್ಗೆ ವಾಕ್ ಮಾಡಲು ತೆರಳಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಕೊನೆಯುಸಿರೆಳೆದರು.
ಶರ್ಮಾ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ನಿಧನರಾಗುವ ಎರಡು ಗಂಟೆಗಳ ಮೊದಲು ಶರ್ಮಾ ಅವರು ಟ್ವಿಟ್ಟರ್ ಮೂಲಕ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ್ದರು.
Next Story





