ಮಂಗಳೂರು: ಮಕ್ಕಳ ಕಳ್ಳ ಸಾಗಣೆ ತಡೆಗೆ ಜನಜಾಗೃತಿ ರ್ಯಾಲಿ

ಮಂಗಳೂರು, ಅ. 27: ದ.ಕ. ಜಿಲ್ಲಾ ಚೈಲ್ಡ್‌ಲೈನ್-1098 ಮತ್ತು ದ.ಕ. ಜಿಲ್ಲಾಡಳಿತ ಹಾಗೂ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಂಗಳೂರು ಸೈಂಕ್ಲಿಂಗ್ ಕ್ಲಬ್, ಅಲೋಶಿಯನ್ ಬಾಯ್ಸಿಹೋಮ್ ಮಂಗಳೂರು, ಜೀವನ್ದಾರ ಕುಲಶೇಖರ, ಸಹೋದಯ ಬೆಥನಿ, ಪರಿಸರ ಆಸಕ್ತರ ಒಕ್ಕೂಟ, ಓಯಸಿಸ್ ಸಂಸ್ಥೆ ಬೆಂಗಳೂರು, ಕೆಜಿಎಸ್ ದ.ಕ. ಜಿಲ್ಲೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಸಾಗಾಟ ಮತ್ತು ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ರ್ಯಾಲಿಯು ರವಿವಾರ ನಗರದಲ್ಲಿ ಜರುಗಿತು.
ನಗರದ ಲಾಲ್‌ಬಾಗ್‌ನಿಂದ ಆರಂಭಗೊಂಡ ಬೈಸಿಕಲ್ ರ್ಯಾಲಿಗೆ ಕೂಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಚಾಲನೆ ನೀಡಿದರು.
ಈ ಸಂದರ್ಭ ಕ್ಲಬ್‌ನ ಕೋಶಾಧಿಕಾರಿ ಮೋಹನ್ ಶೆಟ್ಟಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ, ಅನಿಲ್ ಶೇಟ್, ಹರ್ಷವರ್ಧನ ಶೇಟ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಝಾಕಿರ್ ಹುಸೈನ್, ಸುರೇಶ್ ಶೆಟ್ಟಿ, ನಂದಾಪಾಯಸ್ ಮತ್ತಿತರರು ಪಾಲ್ಗೊಂಡಿದ್ದರು.
ಮಂಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ನಡೆದ ಬೈಸಿಕಲ್ ರ್ಯಾಲಿಯು ಲಾಲ್‌ಭಾಗ್ ಸರ್ಕಲ್‌ನಿಂದ ಕೆಎಸ್ಸಾರ್ಟಿಸಿ, ಕದ್ರಿ ಪಾರ್ಕ್, ನಂತೂರು,ಮಲ್ಲಿಕಟ್ಟೆ, ಬಲ್ಮಠ, ಜ್ಯೋತಿ, ಹಂಪನಕಟ್ಟೆ, ಕೇಂದ್ರ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿಯ ಕಚೇರಿ ತಲುಪಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಲಶೇಖರ್ ಇನ್ಫಾಂಟ್ ಮೇರಿಸ್ ಹಾಸ್ಟೆಲ್ ವಿದ್ಯಾರ್ಥಿಗಳಿಂದ ‘ಅರಿವು’ ನಾಟಕ ಪ್ರದರ್ಶನಗೊಂಡಿತು.












