ಹರ್ಯಾಣದ ಸಿಎಂ ಆಗಿ ಖಟ್ಟರ್, ಡಿಸಿಎಂ ಆಗಿ ದುಷ್ಯಂತ್ ಚೌಟಾಲ ಪ್ರಮಾಣ

ಚಂಡೀಗಢ, ಅ.27: ಹರ್ಯಾಣದ ಮುಖ್ಯ ಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರು ಪ್ರಮಾಣ ವಚನ ಸ್ಪೀಕರಿಸಿದರು.
ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹರ್ಯಾಣದ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರು ಪ್ರಮಾಣವಚನ ಬೋಧಿಸಿದರು. ಖಟ್ಟರ್ ಎರಡನೇ ಅವಧಿಗೆ ಹರ್ಯಾಣದ ಮುಖ್ಯ ಮಂತ್ರಿಯಾಗಿದ್ದಾರೆ.
ಉಪಮುಖ್ಯ ಮಂತ್ರಿಯಾಗಿ ಇದೇ ಸಂದರ್ಭದಲ್ಲಿ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ದುಷ್ಯಂತ್ ಚೌಟಾಲ ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷೇತರ ಶಾಸಕರು ಬಿಜೆಪಿ-ಜಜೆಪಿ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
Next Story





