ಐಸಿಸ್ ಉಗ್ರರಿಂದ 5,000 ಮಹಿಳೆಯರನ್ನು ರಕ್ಷಿಸಿದ ಹುಸೈನ್ ಅಲ್ ಕೈದಿಗೆ ಭಾರತದಲ್ಲಿ 'ಮದರ್ ತೆರೆಸಾ ಪ್ರಶಸ್ತಿ'

ಮುಂಬೈ, ಅ.27: ಐಸಿಸ್ ಉಗ್ರರ ಕಪಿಮುಷ್ಠಿಯಿಂದ 5,000 ಯಝೀದಿ ಮಹಿಳೆಯರನ್ನು ರಕ್ಷಿಸಿದ ಹುಸೈನ್ ಅಲ್ ಕೈದಿ ಅವರಿಗೆ ಪ್ರತಿಷ್ಠಿತ ಮದರ್ ತೆರೆಸಾ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನವೆಂಬರ್ 3ರಂದು ನಡೆಯಲಿದೆ.
ಈ ಪ್ರಶಸ್ತಿ ವಿತರಣಾ ಸಮಾರಂಭದ ಮುನ್ನಾದಿನ ನಡೆಯಲಿರುವ ವಿಚಾರಸಂಕಿರಣದಲ್ಲಿ ಹುಸೈನ್ ಅವರಿಂದ ರಕ್ಷಿಸಲ್ಪಟ್ಟ ಇಮಾನ್ ಅಬ್ದುಲ್ಲಾ ತನ್ನ ಕಥೆಯನ್ನು ಬಿಚ್ಚಿಡಲಿದ್ದಾರೆ. ಈ ಮಾಹಿತಿಯನ್ನು ಪ್ರಶಸ್ತಿ ನೀಡುತ್ತಿರುವ ಹಾರ್ಮನಿ ಫೌಂಡೇಶನ್ ಅಧ್ಯಕ್ಷ ಹಾಗೂ ಸ್ಥಾಪಕ ಅಬ್ರಹಾಂ ಮಥಾಯಿ ನೀಡಿದ್ದಾರೆ.
ಹುಸೇನ್ ಅಲ್ ಕೈದಿ ಅವರು ಆಫೀಸ್ ಆಫ್ ರೆಸ್ಕ್ಯೂ ಆಫ್ ಯಜೀದೀಸ್ ಇದರ ನಿರ್ದೇಶಕರಾಗಿದ್ದಾರೆ.
Next Story





