ಮಂಗಳೂರು ಮನಪಾ ಚುನಾವಣೆ: ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ
ಮಂಗಳೂರು, ಅ.28: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಬಿಜೆಪಿಯು ಸೋಮವಾರ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊಸ ಮುಖಗಳು ಕಂಡು ಬಂದಿವೆ.
ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಂಜೀವ ಮಠಂದೂರು ಸೋಮವಾರ 35 ವಾರ್ಡ್ಗಳಿಗೆ ಪ್ರಕಟಿಸಿದ ಪಟ್ಟಿಯಲ್ಲಿ 14 ಮಹಿಳೆಯರು ಮತ್ತು 21 ಪುರುಷರಿದ್ದಾರೆ. ಮಾಜಿ ಕಾರ್ಪೊರೇಟರ್ಗಳ ಪೈಕಿ ಕೆಲವರು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಂದರೆ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ದಿವಾಕರ್, ಸುಮಿತ್ರಾ ಕರಿಯ ಮತ್ತಿತರ ಮಾಜಿ ಕಾರ್ಪೊರೇಟರ್ಗಳು ಈ ಬಾರಿಯೂ ಕಣಕ್ಕಿಳಿಯಲಿ ದ್ದಾರೆ. ಕುದ್ರೋಳಿ ವಾರ್ಡ್ನ ಸಾಮಾನ್ಯ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಅಭ್ಯರ್ಥಿಗಳು: ಸುರತ್ಕಲ್ (ಪಶ್ಚಿಮ) ವಾರ್ಡ್ ಸಂಖ್ಯೆ 1- ಶೋಭಾ ರಾಜೇಶ್, ಸುರತ್ಕಲ್ (ಪೂರ್ವ) ವಾರ್ಡ್- 2- ಶ್ವೇತಾ ಎ., ಕಾಟಿಪಳ್ಳ (ಪೂರ್ವ) ವಾರ್ಡ್ 3- ಲೋಕೇಶ್ ಬೊಳ್ಳಾಜೆ, ಕಾಟಿಪಳ್ಳ (ಕೃಷ್ಣಾಪುರ) ವಾರ್ಡ್ 4- ಲಕ್ಷ್ಮಿಶೇಖರ ದೇವಾಡಿಗ, ಹೊಸಬೆಟ್ಟು ವಾರ್ಡ್ 8- ವರುಣ್ ಚೌಟ, ಕುಳಾಯಿ ವಾರ್ಡ್ 9- ವೇದಾವತಿ ಯಾನೆ ಜಾನಕಿ, ಬೈಕಂಪಾಡಿ ವಾರ್ಡ್ 10- ಸುಮಿತ್ರಾ ಕರಿಯ, ಪಣಂಬೂರು ವಾರ್ಡ್ 11- ಸುನೀತಾ, ಪಂಜಿಮೊಗರು ವಾರ್ಡ್ 12- ನವೀನ್ಚಂದ್ರ ಬಿ. ಪೂಜಾರಿ, ಕುಂಜತ್ತಬೈಲ್ (ಉತ್ತರ) ವಾರ್ಡ್ 13- ಶರತ್ ಕುಮಾರ್, ಮರಕಡ ವಾರ್ಡ್ 14- ಲೋಹಿತ್ ಅಮೀನ್, ಕುಂಜತ್ತಬೈಲ್ (ದಕ್ಷಿಣ) ವಾರ್ಡ್ 15- ಸುಮಂಗಲಾ, ಬಂಗ್ರಕೂಳೂರು ವಾರ್ಡ್ 16- ಕಿರಣ್ ಕುಮಾರ್, ತಿರುವೈಲ್ ವಾರ್ಡ್ 20- ಹೇಮಲತಾ ರಘುಸಾಲ್ಯಾನ್, ದೇರೆಬೈಲ್ (ಪೂರ್ವ) ವಾರ್ಡ್ 23- ರಜನಿ ಎಲ್. ಕೋಟ್ಯಾನ್, ಬೋಳೂರು ವಾರ್ಡ್ 27- ಜಗದೀಶ ಶೆಟ್ಟಿ, ಮಣ್ಣಗುಡ್ಡ ವಾರ್ಡ್ 28- ಸಂಧ್ಯಾ ಮೋಹನ್ ಆಚಾರ್ಯ, ಕೊಡಿಯಾಲ್ಬೈಲ್ ವಾರ್ಡ್ 30- ಸುಧೀರ್ ಶೆಟ್ಟಿ ಕಣ್ಣೂರು, ಬಿಜೈ ವಾರ್ಡ್ 31- ಪ್ರಶಾಂತ್ ಆಳ್ವ, ಶಿವಬಾಗ್ ವಾರ್ಡ್ 34- ಕಾವ್ಯಾ ನಟರಾಜ, ಪದವು (ಸೆಂಟ್ರಲ್) ವಾರ್ಡ್ 35- ಕಿಶೋರ್ ಕೊಟ್ಟಾರಿ, ಪದವು (ಪೂರ್ವ) ವಾರ್ಡ್ 36- ಅಜೇಯ, ಕೋರ್ಟ್ ವಾರ್ಡ್ 40- ರಂಗನಾಥ ಕಿಣಿ, ಸೆಂಟ್ರಲ್ ಮಾರ್ಕೆಟ್ ವಾರ್ಡ್ 41- ಪೂರ್ಣಿಮಾ, ಕುದ್ರೋಳಿ ವಾರ್ಡ್ 43- ಅರ್ಶದ್, ಬಂದರ್ ವಾರ್ಡ್ 44- ಪ್ರಿಯಾಂಕ ಸುವರ್ಣ, ಪೋರ್ಟ್ ವಾರ್ಡ್ 45- ಅನಿಲ್ ಕುಮಾರ್ , ಕಂಟೋನ್ಮೆಂಟ್ ವಾರ್ಡ್ 46- ದಿವಾಕರ್, ಮಿಲಾಗ್ರಿಸ್ ವಾರ್ಡ್ 47- ಘನಶ್ಯಾಂ, ಕಂಕನಾಡಿ ವಾರ್ಡ್ 49- ವಿಜಯ ಕುಮಾರ್ ಶೆಟ್ಟಿ, ಬಜಾಲ್ ವಾರ್ಡ್ 53- ಚಂದ್ರಶೇಖರ, ಅತ್ತಾವರ ವಾರ್ಡ್ 55- ಶೈಲೇಶ್ ಶೆಟ್ಟಿ, ಮಂಗಳಾದೇವಿ ವಾರ್ಡ್ 56- ಪ್ರೇಮಾನಂದ ಶೆಟ್ಟಿ, ಹೊಗೆಬಜಾರ್ ವಾರ್ಡ್ 57- ರೇವತಿ ಶ್ಯಾಮ್ಸುಂದರ, ಜೆಪ್ಪು ವಾರ್ಡ್ 59- ಭರತ್ ಕುಮಾರ್.