ಮಗುವಿಗೆ ಜನ್ಮ ನೀಡಿ ದಾಖಲೆ ಸೃಷ್ಟಿಸಿದ 67 ವರ್ಷದ ವೃದ್ದೆ

ಬೀಜಿಂಗ್,ಅ.28: 67 ವರ್ಷದ ವೃದ್ಧೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪ್ರಕೃತಿ ಸಹಜವಾಗಿ ಗರ್ಭಧಾರಣೆಯಾದ ದೇಶದ ಅತ್ಯಂತ ಹಿರಿಯ ವಯಸ್ಸಿನ ದಂಪತಿ ತಾವೆಂದು, ಮಗುವಿನ ಹೆತ್ತವರು ಹೇಳಿಕೊಂಡಿದ್ದಾರೆ.
ಮಗು ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಟಿಯಾನ್ ಎಂಬ ಉಪನಾಮ ಹೊಂದಿರುವ ಈ ಮಹಿಳೆಗೆ ಝಾವೊ ಜಿಯಾಂಗ್‌ನಗರದ ಪ್ರಸವ ಹಾಗೂ ಶಿಶು ಆರೋಗ್ಯ ಪಾಲನಾ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆಯನ್ನು ಮಾಡಲಾಯಿತು.
ಸ್ವರ್ಗದಿಂದ ಈ ಮಗುವು ನಮಗೆ ನೀಡಲಾಗಿದೆ ಎಂದು ಟಿಯಾನ್ ಅವರ 68 ವರ್ಷ ವಯಸ್ಸಿ ಪತಿ ಹುವಾಂಗ್ ತಿಳಿಸಿದ್ದಾರೆ.
ಟಿಯಾನ್ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿವೆ. ಚೀನಾವು ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಒಂದು ಮಗು ನೀತಿಯನ್ನು ಹೇರಿದ ಕೇವಲ ಎರಡು ವರ್ಷಗಳ ಮೊದಲು ಅಂದರೆ 1977ರಲ್ಲಿ ಇವರಿಗೆ ಗಂಡು ಮಗುವಾಗಿತ್ತು.
Next Story





