ಪಠ್ಯೇತರ ಚಟುವಟಿಕೆಗಳಿಂದ ಸೃಜನಶೀಲತೆ ಸಾಧ್ಯ: ಸಂಚಾರಿ ಚೌಧರಿ

ಬೆಂಗಳೂರು, ಅ.28: ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಐಐಎಚ್‌ಎಂ ಬೆಂಗಳೂರು ವಿಭಾಗದ ನಿರ್ದೇಶಕಿ ಸಂಚಾರಿ ಚೌಧರಿ ಹೇಳಿದರು.
ನಗರದ ಅಗ್ರಗಾಮಿ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ‘2019- ಪ್ರತಿಭೋಲ್ಲಾಸ’ ಅಂತರ್ ಕಾಲೇಜು ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಮಂಜುಳ ಪಿ., ಕಾಲೇಜಿನ ಛೇರ್ಮನ್ ಡಾ. ಸತೀಶ್ ಚಂದ್ರ, ಗಾಯಕಿ ರಮ್ಯ, ಸೀಮಾ ಶರತ್, ಕೆ.ಸಿ.ದಾಸ್, ಸುಭಾಷ್ ಚಂದ್ರ ಬೋಸ್, ಪ್ರಭಾಕರ್ ಇದ್ದರು.
Next Story





