ಪಾಕ್ ಪಡೆಗಳ ಶೆಲ್ ದಾಳಿಗೆ ಮೂವರು ಅಫ್ಘಾನ್ ಮಹಿಳೆಯರು ಮೃತ್ಯು

ಕಾಬೂಲ್,ಅ.28: ಅಫ್ಘಾನಿಸ್ತಾನದ ಪೂರ್ವ ಕುನಾರ್ ಪ್ರಾಂತದ ಗಡಿಯುದ್ದಕ್ಕೂ ರವಿವಾರ ಪಾಕ್ ಪಡೆಗಳು ನಡೆಸಿದ ಮೋರ್ಟಾರ್ ಶೆಲ್ ದಾಳಿಯಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆಯೂ ಅಫ್ಘಾನ್ ಹಾಗೂ ಪಾಕ್ ಪಡೆಗಳ ನಡುವೆ ಗುಂಡಿನ ಚಕಮಕಿ ಪುನಾರಂಭಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಕುನಾರ್ ಪ್ರಾಂತದ ಗಡಿಜಿಲ್ಲೆಯಾದ ನಾರಿಯಲ್ಲಿನ ವಿವಾದಿತ ಗಡಿ ಸಮೀಪ ಪಾಕ್ ಸೈನಿಕರು, ಸೇನಾಘಟಕವೊಂದರ ನಿರ್ಮಾಣಕ್ಕೆ ಯತ್ನಿಸಿದಾಗ ಉಭಯ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿತೆಂದು ಪೂರ್ವ ಕುನಾರ್ ಪ್ರಾಂತದ ಗವರ್ನರ್ ಅಬ್ದುಲ್ ಘನಿ ಮೂಸಾಮೆಮ್ ತಿಳಿಸಿದ್ದಾರೆ.
ಎರಡು ತಾಸುಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಮೂವರು ಅಫ್ಘಾನ್ ಮಹಿಳೆರು ಸಾವನ್ನಪ್ಪಿದ್ದಾರೆ. ಇತರ ನಾಲ್ವರು ನಾಗರಿಕರಿಗೂ ಗಾಯಗಳಾಗಿವೆ.ಘಟನೆಯ ಬಗ್ಗೆ ಪಾಕ್ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
Next Story





