ವೃದ್ಧೆಯೊಬ್ಬರ ಅಡುಗೆಮನೆಯಲ್ಲಿದ್ದ ಕಲಾಕೃತಿ 26.6 ದಶಲಕ್ಷ ಡಾಲರ್‌ಗೆ ಹರಾಜು

ಪ್ಯಾರಿಸ್,ಅ.28: ಹಿರಿಯ ವಯಸ್ಸಿನ ಫ್ರೆಂಚ್ ಮಹಿಳೆಯೊಬ್ಬರ ಅಡುಗೆ ಮನೆಯಲ್ಲಿ ಪತ್ತೆಯಾಗಿದ್ದ ಹಳೆಯ ಚಿತ್ರಕಲಾಕೃತಿಯೊಂದು 26.6 ದಶಲಕ್ಷ ಡಾಲರ್ ಬೆಲೆಗೆ ಹರಾಜಾಗಿದೆ.
13ನೇ ಶತಮಾನದ ಇಟಲಿಯನ್ ಚಿತ್ರಕಲಾವಿದ ಸಿಮಾಬ್ಯು ರಚಿಸಿದ ಈ ಅಪೂರ್ವ ಕಲಾಕೃತಿಯನ್ನು ಹರಾಜುದಾರರೊಬ್ಬರು ಉತ್ತರ ಫ್ರಾನ್ಸ್‌ನ ಕಾಂಪಿಜೆನ್ ಎಂಬಲ್ಲಿರುವ ವೃದ್ಧೆಯೊಬ್ಬರ ಮನೆಯಲ್ಲಿ ಪತ್ತೆಹಚ್ಚಿದ್ದರು.
ಹರಾಜುದಾರ ಸಂಸ್ಥೆ ಡೊಮಿನಿಕ್ ಲೆ ಕೌಂಟ್ ಆ್ಯಕ್ಟೆನ್, ಈ ಕಲಾಕೃತಿಯನ್ನು ಉತ್ತರ ಪ್ಯಾರಿಸ್‌ನ ಚ್ಯಾಂಟಿಲಿ ಎಂಬಲ್ಲಿನ ಅನಾಮಧೇಯ ವ್ಯಕ್ತಿಗೆ ಮಾರಾಟ ಮಾಡಿದೆ.
Next Story





