ಜಮ್ಮು ಕಾಶ್ಮೀರ: ಉಗ್ರರಿಂದ ಟ್ರಕ್ ಚಾಲಕನ ಹತ್ಯೆ
ಸಾಂದರ್ಭಿಕ ಚಿತ್ರ
ಶ್ರೀನಗರ, ಅ. 28: ಜಮ್ಮು ಹಾಗೂ ಕಾಶ್ಮೀರದ ಅನಂತ್ನಾಗ್ನಲ್ಲಿ ಸೋಮವಾರ ತನ್ನ ಟ್ರಕ್ಗೆ ಆ್ಯಪಲ್ ಹೇರಿಸುತ್ತಿದ್ದ ಚಾಲಕನನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಕಾಶ್ಮೀರ ವಲಯದಿಂದ ಆ್ಯಪಲ್ಗಳನ್ನು ಸಾಗಾಟ ಮಾಡುತ್ತಿರುವ ಟ್ರಕ್ ಚಾಲಕರ ಮೇಲೆ ನಡೆಯುತ್ತಿರುವ ನಾಲ್ಕನೇ ದಾಳಿ ಇದಾಗಿದೆ. ಬಾರಮುಲ್ಲಾ ಜಿಲ್ಲೆಯ ಸೋಪೊರೆಯಲ್ಲಿ ಭಯೋತ್ಪಾದಕರು ಗ್ರೆನೆಡ್ ದಾಳಿ ನಡೆಸಿ 20 ಮಂದಿ ಗಾಯಗೊಂಡ ಒಂದು ಗಂಟೆ ಬಳಿಕ ಈ ಘಟನೆ ನಡೆದಿದೆ.
Next Story