ಗಾಂಜಾ ಸೇವನೆ: ವಿದ್ಯಾರ್ಥಿಗಳ ಸೆರೆ
ಮಂಗಳೂರು, ಅ.29: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರ ನಿವಾಸಿ ಮುಹಮ್ಮದ್ ನಸೀರ್ (21), ಕೇರಳ ನಿವಾಸಿಗಳಾದ ಹೇಮಂತ್ ಥಾಮಸ್ (21), ಕುರುವಿಲ್ಲಾ ಜಾರ್ಜ್ (21) ಬಂಧಿತರು. ಇವರು ಬಲ್ಲಾಳ್ಬಾಗ್ ಅಪಾರ್ಟ್ಮೆಂಟ್ವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಬರ್ಕೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ವೈದ್ಯಕೀಯ ತಪಾಸಣೆಯಲ್ಲಿ ಆರೊಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.
Next Story