ಫಿಲಿಪ್ಪೀನ್ಸ್ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆಯಿಲ್ಲ
ಮನಿಲಾ (ಫಿಲಿಪ್ಪೀನ್ಸ್), ಅ. 29: ರಿಕ್ಟರ್ ಮಾಪಕದಲ್ಲಿ 6.6ರಷ್ಟಿದ್ದ ಪ್ರಬಲ ಭೂಕಂಪ ದಕ್ಷಿಣ ಫಿಲಿಪ್ಪೀನ್ಸ್ನಲ್ಲಿ ಮಂಗಳವಾರ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕಟ್ಟಡಗಳು ಕಂಪಿಸಿದವು ಹಾಗೂ ಭಯಭೀತ ಜನರು ರಸ್ತೆಗಳಿಗೆ ಓಡಿದರು.
ಮಿಂಡನಾವೊ ದ್ವೀಪದಲ್ಲಿ ಈ ತಿಂಗಳ ಆದಿ ಭಾಗದಲ್ಲಿ ಭೂಕಂಪ ಸಂಭವಿಸಿದ ಪ್ರದೇಶದಲ್ಲೇ ಮಂಗಳವಾರದ ಭೂಕಂಪವೂ ಸಂಭವಿಸಿತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ. ಆದರೆ, ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಗಿಲ್ಲ.
ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.
Next Story